Advertisement
ಸಿಆರ್‌ಝಡ್ ಪ್ರದೇಶದಲ್ಲಿ ವಾಸ್ತವದಲ್ಲಿ ಮರಳು ವಾಣಿಜ್ಯ ಉದ್ದೇಶಕ್ಕಾಗಿ ತೆಗೆಯುವಂತೆಯೇ ಇರಲಿಲ್ಲ, ಆದರೂ ಮರಳು ಮಾಫಿಯಾ ಒತ್ತಡದಿಂದ ಆಡಳಿತದವರು ಸಿಆರ್‌ಝಡ್ ವ್ಯಾಪ್ತಿಯಲ್ಲಿ ದೋಣಿ ಸಂಚಾರಕ್ಕೆ ಪೂರಕವಾಗಿ ಎಂಬ ನೆಪವೊಡ್ಡಿ ಮರಳನ್ನು ತೆಗೆದು ಮಾರಾಟ ಮಾಡುತ್ತಿದ್ದರು, ಈಗ ಎನ್‌ಜಿಟಿ ಆದೇಶವು ಅದಕ್ಕೆ ತಡೆಯೊಡ್ಡಿದೆ ಎಂದು ಪರಿಸರವಾದಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
Related Articles
Advertisement
ಸುಪ್ರೀಂಕೋರ್ಟಿಗೆ ಮೊರೆಸಿಆರ್ಝಡ್ ಪ್ರದೇಶದಲ್ಲಿ ಕಾನೂನು ಬದ್ಧರೀತಿಯಲ್ಲಿ ನಾವು ಮರಳು ತೆಗೆಯುತ್ತಿದ್ದೆವು, ಈಗ ಎನ್‌ಜಿಟಿ ಆದೇಶದಿಂದ ನಮಗೆ ತೊಂದರೆಯೇ ಹೊರತು ಕದ್ದು ಮುಚ್ಚಿ ಅಕ್ರಮ ಮರಳುಗಾರಿಕೆ ಮಾಡುವುದು ನಿಲ್ಲುವುದಿಲ್ಲ. ಹಾಗಾಗಿ ನಮಗೆ ಯಾಕೆ ಈ ಶಿಕ್ಷೆ ? ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ಮರಳು ಸಾಗಾಟಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಮಯೂರ್ ಉಳ್ಳಾಲ್ ತಿಳಿಸಿದ್ದಾರೆ. ಅದೇ ರೀತಿ ಕರ್ನಾಟಕ ಜನಜಾಗೃತಿ ವೇದಿಕೆಯಿಂದಲೂ ಎನ್‌ಜಿಟಿ ಆದೇಶ ವಿರುದ್ಧ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಲಾಗಿದೆ. ದರ ಏರಿಕೆಯ ಸಾಧ್ಯತೆ
ಸದ್ಯ ನಾನ್ ಸಿಆರ್‌ಝಡ್ ಮರಳು ಮಂಗಳೂರಿನಲ್ಲಿ 300 ಸಿಎಫ್‌ಟಿ-ಘನ ಅಡಿ(ಸುಮಾರು 8ರಿಂದ 10 ಟನ್) 12ರಿಂದ 13,500 ರೂ.ಗೆ ಸಿಗುತ್ತಿದೆ. ಒಂದು ವೇಳೆ ಸಿಆರ್‌ಝಡ್ ಮರಳು ತೆಗೆಯಲು ಪ್ರಾರಂಭವಾದರೆ ಮರಳಿನ ದರ ಸುಮಾರು 7ರಿಂದ 8,000 ರೂ.ಗೆ ಇಳಿಯಬಹುದು ಎನ್ನುವ ಲೆಕ್ಕಾಚಾರವಿದೆ. ಕಳೆದ ಒಂದೆರಡು ತಿಂಗಳಿನಿಂದ ಸಿಆರ್‌ಝಡ್ ಮರಳಿಗಾಗಿ ಕಟ್ಟಡ ನಿರ್ಮಾಣದವರು ಕಾಯುತ್ತಿದ್ದರು, ಆದರೆ ಎನ್‌ಜಿಟಿ ಆದೇಶದಿಂದ ಈ ಸಾಧ್ಯತೆ ಈಗ ತಪ್ಪಿದಂತಾಗಿದೆ. ಇನ್ನು ಎಂ-ಸ್ಯಾಂಡ್ ಕೂಡ 300 ಸಿಎಫ್‌ಟಿಗೆ 15 ಸಾವಿರ ರೂಪಾಯಿಯಷ್ಟಿದೆ. ತುಂಬೆ, ಆದ್ಯಪಾಡಿ ಡ್ಯಾಂನ ಮರಳು ಸಿಕ್ಕಿದರೂ ಅದು ಸಾಗಾಟ ವೆಚ್ಚವೂ ಸೇರಿದರೆ 12-13 ಸಾವಿರ ರೂ. ಆಸುಪಾಸಿಗೆ ಬರಲಿದೆ, ಹೀಗಾಗಿ ಮರಳಿನ ದರವಿನ್ನು ಇಳಿಯಲಾರದು ಎನ್ನುತ್ತಾರೆ ಕಟ್ಟಡ ನಿರ್ಮಾಣ ಕ್ಷೇತ್ರದವರು.