ಮುಖ್ಯವಾಗಿ ಇವಿಎಂ ಯಂತ್ರದ ಸಮಸ್ಯೆಯಿದೆ. ಜನರು ನೀಡಿರುವ ತೀರ್ಮಾನಕ್ಕೆ ತಲೆಬಾಗುತ್ತೇನೆ. ನನ್ನ ಪರವಾಗಿ ಕೆಲಸ ಮಾಡಿದವರು, ಮತ ನೀಡಿದವರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಮತದಾರರಿಗೆ ಧನ್ಯವಾದಗಳು.
Advertisement
ಮುಂದಿನ ರಾಜಕೀಯ ಭವಿಷ್ಯವೇನು?ಮುಂದೆ ಲೋಕಸಭಾ ಚುನಾವಣೆಯಿದೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಇವುಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸಲಾಗುವುದು.
ನನ್ನ ಅವಧಿಯಲ್ಲಿ ಈಗಾಗಲೇ ಹಲವು ಕಾಮಗಾರಿಗಳು ಆರಂಭವಾಗಿವೆ. ಅವುಗಳು ಉತ್ತಮ ರೀತಿಯಲ್ಲಿ ಮೊದಲು ಪೂರ್ಣಗೊಳ್ಳಬೇಕು. 15ಕ್ಕೂ ಹೆಚ್ಚು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ, ಅವುಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ಉತ್ತಮ ರೀತಿಯಲ್ಲಿ ಕಾಮಗಾರಿ ಮುಗಿಸುವಂತೆ ನೋಡಿಕೊಂಡಲ್ಲಿ ಉತ್ತಮ.