Advertisement

ಗುರುಕುಲ ಶಿಕ್ಷಣದಿಂದ ಸಂಸ್ಕಾರ

06:10 PM Mar 05, 2021 | Team Udayavani |

ಕೊಪ್ಪ: ಗುರುಕುಲ ಶಿಕ್ಷಣದಿಂದಸಂಸ್ಕಾರ ದೊರೆಯುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯಮೌಲ್ಯಗಳನ್ನು ಬೆಳೆಸಿಕೊಂಡರೆ ಮುಂದಿನ ಜೀವನ ಅರ್ಥಪೂರ್ಣ ವಾಗಿರುತ್ತದೆ ಎಂದು ಬಾಳಗಾರು ಮಠದ ಶ್ರೀ ರಘುಭೂಷಣ ತೀರ್ಥ

Advertisement

ಸ್ವಾಮೀಜಿ ಅಭಿಪ್ರಾಯಪಟ್ಟರು. ಹರಿಹರಪುರ ಸಮೀಪದಪ್ರಬೋ ಧಿನಿ ಗುರುಕುಲದಲ್ಲಿ ಬುಧವಾರ ನಡೆದ ಹೊಸ ವಿದ್ಯಾರ್ಥಿಗಳಿಗೆ ದೀûಾ ಕಾರ್ಯಕ್ರಮದಲ್ಲಿ ಆಶೀರ್ವಚನನೀಡಿದ ಅವರು, ಶಿಷ್ಯನಲ್ಲಿರುವ  ಅನಾಸಕ್ತಿ, ಅಹಂಕಾರ, ಅನ್ಯಮನಸ್ಕತೆ, ಅನಾದರಗಳಂತಹ ದುರ್ಗುಣಗಳನ್ನು ದೂರಗೊಳಿಸಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ಜವಾಬ್ದಾರಿ ಗುರುವಿನದ್ದು. ಪ್ರಬೋ ಧಿನಿ ಗುರುಕುಲದಂತಹ ಪ್ರಶಸ್ತವಾದ ವಾತಾವರಣದಲ್ಲಿ ಶಿಕ್ಷಣ ಪಡೆಯಲು ಆಯ್ಕೆಯಾಗಿರುವ ಹೊಸ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಅಭಿನಂದನೆ ತಿಳಿಸಿದರು.

ಬೆಂಗಳೂರಿನ ವೇದ ವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕರು, ಕರ್ನಾಟಕ ಗುರುಕುಲ ಪ್ರಕಲ್ಪಗಳ ಸಂಯೋಜಕರೂ ಆದ ಡಾ| ಮಹಾಬಲೇಶ್ವರ ಭಟ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಕುಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಇರಬಹುದಾದ ದೋಷಗಳನ್ನು ನಿವಾರಿಸಿ, ಹನ್ನೆರಡು ವರ್ಷಗಳ ಕಾಲ ಅವರಿಗೆ ಅಗತ್ಯ ಸಂಸ್ಕಾರಗಳನ್ನು ನೀಡಿ ಪೂರ್ಣ ಪ್ರಮಾಣದ ವ್ಯಕ್ತಿತ್ವ ವಿಕಸನವನ್ನು ಸಾ ಧಿಸುವ ಪ್ರಯತ್ನ ಗುರುಕುಲದಲ್ಲಿ ಮಾಡಲಾಗುತ್ತಿದೆ ಎಂದರು.

ಉದ್ಯಮಿ ಮಹಾರುದ್ರಪ್ಪ ಮಾತನಾಡಿ,ಗುರುಕುಲದಲ್ಲಿ ಕಲಿಸಿಕೊಡುತ್ತಿರುವ ಶಿಕ್ಷಣ ಪದ್ಧತಿಯು ದೇಶವ್ಯಾಪಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಬೋಧಿ ನಿ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ತರಾದ ಎಚ್‌.ಬಿ. ರಾಜಗೋಪಾಲ್‌ ವಹಿಸಿದ್ದರು. ಪ್ರಬೋ ಧಿನಿ ಟ್ರಸ್ಟ್‌ನ ಕಾರ್ಯದರ್ಶಿ ಉಮೇಶ್‌ ರಾವ್‌ ಸ್ವಾಗತಿಸಿದರು. ವಿಶ್ವಸ್ತರಾದ ಗಣೇಶ್‌ ರಾವ್‌ ವಂದಿಸಿದರು. ವಿಶ್ವಸ್ತರಾದ ಸುವರ್ಣಾ ಕೇಶವ, ಆಹ್ವಾನಿತ ಸದಸ್ಯ ನಾಗರಾಜ್‌ ಎಚ್‌.ಎನ್‌. ಹಾಗೂ ಅಖೀಲ ಭಾರತ ಸಾಹಿತ್ಯ ಪರಿಷತ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಇದ್ದರು. ಗುರುಕುಲಕ್ಕೆ ರಾಜ್ಯದ್ಯಂತ ಸಂದರ್ಶನದ ಮೂಲಕ ಆಯ್ಕೆಯಾದ 21 ಜನ ವಿದ್ಯಾರ್ಥಿಗಳು ಸೇರ್ಪಡೆಗೊಂಡರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next