Advertisement

ಸಮೃದ್ಧಿ ಮಹಾಮಾರ್ಗ ಇಂದು ಲೋಕಾರ್ಪಣೆ; ಅದರ ವಿಶೇಷತೆಗಳು ಇಲ್ಲಿವೆ…

08:35 PM Dec 10, 2022 | Team Udayavani |

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಗೋವಾದ ಮೋಪಾದಲ್ಲಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದರ ಜತೆಗೆ ಮಹಾರಾಷ್ಟ್ರದ ನಾಗ್ಪುರದಿಂದ ಶಿರ್ಡಿಯವರೆಗೆ ನಿರ್ಮಿಸಲಾಗಿರುವ “ಸಮೃದ್ಧಿ ಮಹಾಮಾರ್ಗ’ದ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ಅದರ ವಿಶೇಷತೆಗಳು ಇಲ್ಲಿವೆ.

Advertisement

ಹೆಗ್ಗಳಿಕೆ ಏನು?
– ದೇಶದಲ್ಲಿಯೇ ಅತ್ಯಂತ ಉದ್ದದ ಎಕ್ಸ್‌ಪ್ರೆಸ್‌ ವೇ.
– ಅಮರಾವತಿ, ಔರಂಗಾಬಾದ್‌ ಮತ್ತು ನಾಶಿಕ್‌ ಪ್ರದೇಶಗಳ ಹತ್ತು ಜಿಲ್ಲೆಗಳಿಗೆ ಸಂಪರ್ಕ.
– ವಿದರ್ಭ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದ 24 ಮತ್ತು ಇತರ 14 ಜಿಲ್ಲೆಗಳಿಗೂ ಪರೋಕ್ಷ ನೆರವು
– ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ವ್ಯಾಪ್ತಿಯಲ್ಲಿ ನಿರ್ಮಾಣ.

ಅನುಕೂಲ ಏನು?
– ಮುಂಬೈನಲ್ಲಿರುವ ಜವಾಹರ್‌ಲಾಲ್‌ ಬಂದರು ಮಂಡಳಿ, ಅಜಂತಾ ಎಲ್ಲೋರಾ, ಶಿರಡಿ, ಲೋನಾರ್‌, ವೆರುಲ್‌ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿಗೆ ಕ್ಷಿಪ್ರಗತಿಯಲ್ಲಿ ಭೇಟಿ.
– ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇಗೆ ಕೂಡ ಸಂಪರ್ಕ.
– ಮಹಾರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ನೆರವು.

ನಿರ್ಮಾಣದ ಹೊಣೆ
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.

150 ಕಿಮೀ ಪ್ರತಿ ಗಂಟೆಗೆ- ಉದ್ದೇಶಿತ ವೇಗದ ಮಿತಿ. ವಿವಿಧ ವರ್ಗಗಳ ವಾಹನಗಳಿಗೆ ಅನ್ವಯವಾಗುವಂತೆ ವೇಗದ ಮಿತಿ ಇದೆ.
5 ಲಕ್ಷ- ಉದ್ಯೋಗ ಸೃಷ್ಟಿಯ ನಿರೀಕ್ಷೆ

Advertisement

701 ಕಿಮೀ- ಉದ್ದೇಶಿತ ಯೋಜನೆಯ ಒಟ್ಟು ಉದ್ದ
55,000 ಕೋಟಿ ರೂ.- ಕಾಮಗಾರಿ ವೆಚ್ಚ
520 ಕಿಮೀ- ಸದ್ಯ ಉದ್ಘಾಟನೆಯಾಗಲಿರುವ ಎಕ್ಸ್‌ಪ್ರೆಸ್‌ ವೇಯ ಉದ್ದ

 

 

Advertisement

Udayavani is now on Telegram. Click here to join our channel and stay updated with the latest news.

Next