Advertisement

ಸಮಿತ್‌ ದ್ರಾವಿಡ್‌ ದ್ವಿಶತಕ, ಮಲ್ಯ ಅದಿತಿಗೆ “ಬಿಟಿಆರ್‌ ಶೀಲ್ಡ್‌’ಪ್ರಶಸ್ತಿ

08:58 AM Feb 27, 2020 | keerthan |

ಬೆಂಗಳೂರು: ಕ್ರಿಕೆಟ್‌ ದಂತಕಥೆ ರಾಹುಲ್‌ ದ್ರಾವಿಡ್‌ ಸುಪುತ್ರ ಸಮಿತ್‌ ದ್ರಾವಿಡ್‌ ದ್ವಿಶತಕ ಸಾಹಸದಿಂದ 14 ವಯೋಮಿತಿಯೊಳಗಿನ ಶಾಲಾ ಏಕದಿನ ಕ್ರಿಕೆಟ್‌ ಕೂಟದಲ್ಲಿ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ ಬಿಟಿಆರ್‌ ಶೀಲ್ಡ್‌ ಗೆದ್ದುಕೊಂಡಿದೆ.

Advertisement

ಬುಧವಾರ ಉದ್ಯಾನನಗರಿಯಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 132 ರನ್‌ ಗಳಿಂದ ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ವಿರುದ್ಧ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ ಜಯ ಗಳಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ 50 ಓವರ್‌ಗೆ 3 ವಿಕೆಟ್‌ಗೆ 386 ರನ್‌ಗಳಿಸಿತು. ಸಮಿತ್‌ ದ್ರಾವಿಡ್‌ 26 ಬೌಂಡರಿ, 1 ಸಿಕ್ಸರ್‌ ಮೂಲಕ ಗರ್ಜಿಸಿ ದರು. ಈ ಗುರಿ ಬೆನ್ನಟ್ಟಿದ ಬಿಜಿಎಸ್‌ 50 ಓವರ್‌ಗೆ 3 ವಿಕೆಟ್‌ಗೆ 254 ರನ್‌ಗಳಿಸಿ ಶರಣಾಯಿತು

Advertisement

Udayavani is now on Telegram. Click here to join our channel and stay updated with the latest news.

Next