Advertisement

ಸಲಿಂಗ ವಿವಾಹ- ಸಂಸತ್‌ ಚರ್ಚೆಗೆ ಅವಕಾಶ ನೀಡಿ: ಕೇಂದ್ರದಿಂದ ಸುಪ್ರೀಂಗೆ ಮನವಿ

08:51 PM Apr 26, 2023 | Team Udayavani |

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಪಟ್ಟಂತೆ ಹಲವಾರು ಪ್ರಶ್ನೆಗಳು ಉದ್ಭವಗೊಂಡಿವೆ. ಆದ್ದರಿಂದ ಪ್ರಶ್ನೆಗಳಿಗೆ ಸಮಂಜಸ ಹಾಗೂ ಸೂಕ್ತ ಉತ್ತರ ಪಡೆಯಲು ಮತ್ತು ತರ್ಕಬದ್ಧ ನಿರ್ಣಯವನ್ನು ತೆಗೆದುಕೊಳ್ಳಲು ಸಂಸತ್‌ಗೆ ಅವಕಾಶ ಮಾಡಿಕೊಡುವಂತೆ ಕೇಂದ್ರಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

Advertisement

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಂವಿಧಾನ ಪೀಠಕ್ಕೆ, ಕೇಂದ್ರ ಸರ್ಕಾರ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಈ ಮನವಿ ಮಾಡಿದ್ದಾರೆ. ಸುಪ್ರೀಂ ವ್ಯವಹರಿಸುತ್ತಿರುವ ಈ ವಿಚಾರವು ತೀರಾ ಸೂಕ್ಷ್ಮವಾಗಿದೆ. ಮಾತ್ರವಲ್ಲದೇ, ಸಮಾಜದ ಮೇಲೆ ತೀವ್ರತರದ ಪರಿಣಾಮವನ್ನೂ ಬೀರುತ್ತದೆ. ಮುಖ್ಯವಾಗಿ ಮದುವೆ ಎಂದರೇನು? ಯಾರ ನಡುವೆ ನಡೆಯುತ್ತದೆ? ಎಂಬುದೇ ಪ್ರಶ್ನೆಯಾಗಿದೆ. ಈ ಸಂಬಂಧಿಸಿದಂತೆ ಸಮಾಜದಲ್ಲಿ ಮತ್ತು ವಿವಿಧ ರಾಜ್ಯಗಳ ಸದನಗಳಲ್ಲಿ ಚರ್ಚೆಯ ಅಗತ್ಯವಿರುವ ಹಿನ್ನೆಲೆ ಸಂಸತ್ತಿನಲ್ಲಿ ಈ ವಿಚಾರದ ನಿರ್ಣಯಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next