Advertisement

ಒಂದೇ ದಿನ CBSC 10, 12ನೇ ತರಗತಿ ಫ‌ಲಿತಾಂಶ?

10:18 PM Apr 19, 2023 | Team Udayavani |

ನವದೆಹಲಿ: ಸಿಬಿಎಸ್‌ಸಿ ಬೋರ್ಡ್‌ನ 10 ಮತ್ತು 12ನೇ ತರಗತಿ ಪರೀಕ್ಷೆಯ ಫ‌ಲಿತಾಂಶವು ಒಂದೇ ದಿನ ಹೊರಬೀಳಲಿದೆ. ಕೆಲವು ಗಂಟೆಗಳ ವ್ಯತ್ಯಾಸದಲ್ಲಿ ಎರಡೂ ತರಗತಿಗಳ ಫ‌ಲಿತಾಂಶವು ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ನಿಗದಿತ ದಿನಾಂಕ ಮತ್ತು ಸಮಯವು ಇನ್ನು ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಏಪ್ರಿಲ್‌ ಕೊನೆ ವಾರ ಅಥವಾ ಮೇ ಮೊದಲ ವಾರದಲ್ಲಿ ಫ‌ಲಿತಾಂಶ ಬಿಡುಗಡೆಯಾಗಲಿದೆ. ಈ ಕುರಿತು ಶೀಘ್ರದಲ್ಲೇ ಸಿಬಿಎಸ್‌ಇ ತಿಳಿಸಲಿದೆ. ಸಿಬಿಎಸ್‌ಸಿ ಅಧಿಕೃತ ವೆಬ್‌ಸೈಟ್‌ಗಳಾದ //results.cbse.nic.in ಮತ್ತು //cbseresuts.nic.in ಮೂಲಕ ವಿದ್ಯಾರ್ಥಿಗಳು ಫ‌ಲಿತಾಂಶ ವೀಕ್ಷಿಸಬಹುದು.

Advertisement

ಅಲ್ಲದೇ ಡಿಜಿಲಾಕರ್‌, ಎಸ್‌ಎಂಎಸ್‌ ಮತ್ತು ಇತರೆ ವೆಬ್‌ಸೈಟ್‌ಗಳ ಮೂಲಕವೂ ಫ‌ಲಿತಾಂಶ ಲಭ್ಯವಿರಲಿದೆ. ಫ‌ಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ತಮ್ಮ ರೋಲ್‌ ನಂಬರ್‌, ಸ್ಕೂಲ್‌ ನಂಬರ್‌, ಜನ್ಮದಿನಾಂಕ ಮತ್ತು ಅಡ್ಮಿಟ್‌ ಕಾರ್ಡ್‌ ಐಡಿ ಅನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next