Advertisement

ಪುಷ್ಪದಲ್ಲಿ ಸಮಂತಾ ಹೈಲೈಟ್‌: ರಶ್ಮಿಕಾ ಕಸಿವಿಸಿ?

08:58 AM Dec 14, 2021 | Team Udayavani |

ಇತ್ತೀಚೆಗಷ್ಟೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿರುವ ನಟಿ ರಶ್ಮಿಕಾ ಮಂದಣ್ಣ ಈಗ “ಪುಷ್ಪ’ ಸಿನಿಮಾದ ಪ್ರಮೋಶನ್‌ನಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರ ಡಿ.17 ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಯಾಗಿ ದೊಡ್ಡ ಹಿಟ್‌ ಆಗಿದೆ.

Advertisement

ಇದರ ಬೆನ್ನಿಗೆ ಬಂದ ಚಿತ್ರದ ಸ್ಪೆಷಲ್‌ ನಂಬರ್‌ ಸಾಂಗ್‌ ಕೂಡಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಈ ಹಾಡಿನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಖತ್‌ ಹಾಟ್‌ ಆಗಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರತಂಡ ಕೂಡಾ ಸಮಂತಾ ಇರುವ ಈ ಹಾಡನ್ನು ಹೆಚ್ಚು ಪ್ರಮೋಟ್‌ ಮಾಡುತ್ತಿದೆ. ಇದು ನಟಿ ರಶ್ಮಿಕಾಗೆ ಕಿರಿಕಿರಿ ಅನಿಸುತ್ತಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಕೇಳಿಬರುತ್ತಿದೆ. ಅದಕ್ಕೆ ಕಾರಣ, ರಶ್ಮಿಕಾ ಈ ಚಿತ್ರದ ನಾಯಕಿಯಾಗಿರೋದು.

ತೆಲುಗಿನಲ್ಲಿ ರಶ್ಮಿಕಾ ನಾಯಕಿಯಾಗಿರುವ ಮತ್ತೂಂದು ಬಿಗ್‌ ಬಜೆಟ್‌ನ ಚಿತ್ರ “ಪುಷ್ಪ’. ಈಗ ರಿಲೀಸ್‌ ಸಮಯದಲ್ಲಿ ತನಗಿಂತ ಸಮಂತಾಗೆ ಹೆಚ್ಚು ಪ್ರಚಾರ ಸಿಗುತ್ತಿದೆ ಎಂಬ ಬೇಸರ ರಶ್ಮಿಕಾ ಅವರದು ಎಂಬ ಗಾಸಿಪ್‌ ಎದ್ದಿದೆ. ಹಾಗಂತ ಈ ಬಗ್ಗೆ ರಶ್ಮಿಕಾ ಆಗಲೀ, ಚಿತ್ರತಂಡವಾಗಲೀ ಮಾತನಾಡಿಲ್ಲ. ಆದರೆ, ಟಾಲಿವುಡ್‌ ಅಂಗಳದಿಂದ ಈ ತರಹದ ಒಂದು ಸುದ್ದಿ ಎದ್ದಿರೋದು ಮಾತ್ರ ಸುಳ್ಳಲ್ಲ

Advertisement

Udayavani is now on Telegram. Click here to join our channel and stay updated with the latest news.

Next