Advertisement

ಪುಷ್ಪ-2 ಆಫ‌ರ್‌ ನಿರಾಕರಿಸಿದ ತೆಲುಗು ನಟಿ ಸ್ಯಾಮ್‌

07:43 PM Feb 15, 2023 | Team Udayavani |

ಚೆನ್ನೈ: ಬ್ಲಾಕ್‌ಬಸ್ಟರ್‌ ಪ್ಯಾನ್‌ ಇಂಡಿಯಾ ಸಿನಿಮಾ “ಪುಷ್ಪ’ದಲ್ಲಿ “ಓ ಅಂಟಾವಾ’ ಹಾಡಿನ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ತೆಲುಗು ನಟಿ ಸಮಂತಾ ಈಗ ಪುಷ್ಪ 2 ಸಿನಿಮಾದ ಆಫ‌ರ್‌ ನಿರಾಕರಿಸಿದ್ದಾರಂತೆ!

Advertisement

ಓ ಅಂಟಾವಾ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆಹಾಕಿದ್ದ ಸುಮಂತಾರ ಬೋಲ್ಡ್‌ ಪಾರ್ಫಾಮೆನ್ಸ್‌, ಸಿನಿಮಾ ಬಿಡುಗಡೆಗೂ ಮುನ್ನವೇ ಕೋಲಾಹಲ ಎಬ್ಬಿಸಿತ್ತು. ಈಗ ಪುಷ್ಪ 2 ಸಿನಿಮಾದ ಸಿದ್ಧತೆ ನಡೆಯುತ್ತಿದ್ದು, ನಿರ್ದೇಶಕ ಸುಕುಮಾರ ಅವರೇ ಆಫ‌ರ್‌ ನೀಡಿದ್ದಾರೆ.

ಸಮಂತಾಗಾಗಿಯೇ ಸಿನಿಮಾದಲ್ಲಿ ಪುಟ್ಟ ಪಾತ್ರವನ್ನೂ ರಚಿಸಿದ್ದರೂ ನಟಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಓ ಅಂಟಾವಾ ಹಾಡಿಗಾಗಿ ನಟಿ 5 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರಂತೆ.

ಇತ್ತೀಚೆಗಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದ ಸ್ಯಾಮ್‌, ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಆಫ‌ರ್‌ ನಿರಾಕರಿಸಿರಬಹುದು ಎನ್ನುವ ಮಾತು ಕೇಳಿಬಂದಿದೆಯಾದರೂ, ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: ಪಾಕಿಸ್ಥಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ; ಪೆಟ್ರೋಲ್ ಬೆಲೆ ಲೀಟರ್‌ಗೆ 32 ರೂ ಹೆಚ್ಚಳ !

Advertisement
Advertisement

Udayavani is now on Telegram. Click here to join our channel and stay updated with the latest news.

Next