Advertisement
ಈ ಗ್ರಾಮ ಆಧರಿಸಿರುವುದು ಕೃಷಿಯನ್ನೇ. 973.17 ಹೆಕ್ಟೇರು ವಿಸ್ತೀರ್ಣದ ಗ್ರಾಮದಲ್ಲಿ ಸುಮಾರು 800 ಎಕರೆ ಕೃಷಿ ಭೂಮಿ ಇದೆ. 500ಕ್ಕೂ ಹೆಚ್ಚು ಕೃಷಿಕರಾಗಿದ್ದಾರೆ. ಕೂಲಿ ಕಾರ್ಮಿಕರೂ ಇದ್ದಾರೆ. ಭತ್ತ, ಧಾನ್ಯ, ವಿವಿಧ ತೋಟಗಾರಿಕಾ ಬೆಳೆಗಳು ಕೃಷಿಯ ನೆಲೆಯಲ್ಲಿದ್ದರೆ, ಇದೇ ಕೃಷಿಕರನ್ನು ಕೈ ಹಿಡಿದಿರುವ ಮತ್ತೂಂದು ಕ್ಷೇತ್ರ ಹೈನುಗಾರಿಕೆ. ಇಷ್ಟಕ್ಕೇ ಇದರ ಆರ್ಥಿಕ ಸಂರಚನೆಗಳು ಮುಗಿಯುವುದಿಲ್ಲ ಇಲ್ಲಿನ ಹವಾಮಾನ ಮತ್ತು ಮಣ್ಣಿನ ಗುಣದಿಂದಾಗಿ ಶಂಕರಪುರ ಮಲ್ಲಿಗೆಯೂ ಅರಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಗ್ರಾಮದ ಕಂಪನ್ನು ಪಸರಿಸಿರುವುದು ಇದೇ ಮಲ್ಲಿಗೆ. 400ಕ್ಕೂ ಅಧಿಕ ಕುಟುಂಬಗಳು ಮಲ್ಲಿಗೆ ಕೃಷಿಯನ್ನು ಅವಲಂಬಿಸಿವೆ.
Related Articles
Advertisement
ಅಣೆಕಟ್ಟು ಶೀಘ್ರ ನಿರ್ಮಾಣವಾದರೆ ಒಳಿತು: ಉಪ್ಪು ನೀರು ಸಮಸ್ಯೆಯು ರೈತರನ್ನು, ಗ್ರಾಮಸ್ಥರನ್ನು ಹೈರಾಣಾಗಿಸಿತ್ತು. ಇದೀಗ ನೂತನವಾಗಿ ಅನುಷ್ಠಾನಗೊಳ್ಳಲಿರುವ 5 ಕೋಟಿ ರೂ. ವೆಚ್ಚದ ಅಣೆಕಟ್ಟು ನಿರ್ಮಾಣದ ಬಳಿಕ ಉಪ್ಪು ನೀರಿನ ಸಮಸ್ಯೆ ಪರಿಹಾರ ಕಾಣುವ ಭರವಸೆ ಇದೆ. ಕುರ್ಕಾಲು-ಸುಭಾಸ್‌ನಗರ ಜಂಕ್ಷನ್ ಬಳಸಿಕೊಂಡು ಮಣಿಪುರ ರಸ್ತೆಗೆ ಸಂಪರ್ಕವನ್ನು ನೀಡುವಂತೆ ಬಸ್ ಸಂಚರಿಸುವ ಮೂಲಕ ನಾಗರೀಕರಿಗೆ ಸೇವೆ ನೀಡುವ ಅವಶ್ಯಕತೆ ಇದೆ. – ಶೋಭಾ ಸಾಲ್ಯಾನ್, ಮಾಜಿ ಅಧ್ಯಕ್ಷರು, ಕುರ್ಕಾಲು ಗ್ರಾಮ ಪಂಚಾಯತ್
-ವಿಜಯ ಆಚಾರ್ಯ ಉಚ್ಚಿಲ