Advertisement

‘Tiger 3’; 300 ಕೋಟಿ ರೂ.ಬಾಚಿಕೊಂಡು ಮುನ್ನುಗ್ಗುತ್ತಿರುವ ಸಲ್ಮಾನ್ ಚಿತ್ರ

03:52 PM Nov 17, 2023 | Team Udayavani |

ಮುಂಬಯಿ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಆಕ್ಷನ್ ಥ್ರಿಲ್ಲರ್ “ಟೈಗರ್ 3” ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ಗಳಿಸಿದೆ ಎಂದು ನಿರ್ಮಾಪಕರು ಶುಕ್ರವಾರ ತಿಳಿಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನವೆಂಬರ್ 12 ರಂದು ಚಿತ್ರ ಬಿಡುಗಡೆಯಾಗಿತ್ತು.

Advertisement

ಮನೀಶ್ ಶರ್ಮಾ ನಿರ್ದೇಶನದ ಮತ್ತು ಯಶ್ ರಾಜ್ ಫಿಲ್ಮ್ಸ್ (YRF) ನಿರ್ಮಿಸಿದ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

YRF ಪ್ರಕಾರ, ಭಾರತದಲ್ಲಿ ಚಿತ್ರ 188.25 ಕೋಟಿ ನಿವ್ವಳ ಕಲೆಕ್ಷನ್ ಮಾಡಿದೆ. ವಾರದ ದಿನಗಳಲ್ಲಿಯೂ ಚಿತ್ರ ಸೂಪರ್ ಸ್ಟ್ರಾಂಗ್ ಹಿಡಿತವನ್ನು ಕಾಯ್ದುಕೊಳ್ಳುವ ಮೂಲಕ 1 ವಾರದ ಪ್ರಯಾಣವನ್ನು ಸುಗಮಗೊಳಿಸಿ ಮುನ್ನುಗ್ಗುತ್ತಿದೆ. ಕೇವಲ 5 ದಿನಗಳಲ್ಲಿ ವಿಶ್ವದಾದ್ಯಂತ 300 ಕೋಟಿ ರೂ. ಳಿಕೆಯನ್ನು ದಾಟಿದೆ ಎಂದು ನಿರ್ಮಾಪಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಟೈಗರ್ 3, “ಪಠಾಣ್” ಚಿತ್ರದ ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವಾಗಿತ್ತು. 2017 ರ ಚಲನಚಿತ್ರ “ಟೈಗರ್ ಜಿಂದಾ ಹೈ” ನ ಮುಂದುವರಿದ ಭಾಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next