ಪ್ರಾ.ಆ. ಕೇಂದ್ರ ಸಾಸ್ತಾನ ಸಂಪರ್ಕ: 0820 2584910
Advertisement
ಸಂಪರ್ಕ ಸಂಖ್ಯೆಡಾ| ರಾಘವೇಂದ್ರ ರಾವ್, ವೈದ್ಯಾಧಿಕಾರಿಗಳು: 9448696970
ಡಾ| ದಿಕ್ಷಾ, ವೈದ್ಯಾಧಿಕಾರಿ: 9481517238
ಮಳೆಗಾಲದಲ್ಲಿ ಎದುರಾಗುವ ಸಾಂಕ್ರಮಿಕ ರೋಗಗಳ ಕುರಿತು ಆರೋಗ್ಯ ಕೇಂದ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಶುಚಿತ್ವದ ಕುರಿತು ಎಚ್ಚರಿಕೆ ನೀಡಿ ಕರಪತ್ರಗಳನ್ನು ಹಂಚುತ್ತಿದ್ದಾರೆ. ರೋಗದ ಲಕ್ಷಣ ಕಂಡು ಬಂದರೆ ಮುಂಜಾಗೃತೆ ಕ್ರಮ ಹಾಗೂ ದೃಢಪಟ್ಟಲ್ಲಿ ಖಾಯಿಲೆ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ.
Related Articles
ಸಾಲಿಗ್ರಾಮ ಹಾಗೂ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗ್ಗೆ 9ರಿಂದ ಅಪರಾಹ್ನ 1 ಹಾಗೂ ಅಪರಾಹ್ನ 1.45ರಿಂದ 4.30ರ ವರೆಗೆ ತರೆದಿರುತ್ತದೆ. ಈ ಸಂದರ್ಭ ಹಿರಿಯ ವೈದ್ಯಾಧಿಕಾರಿಗಳು ಹಾಗೂ ಕಿರಿಯ ಆರೋಗ್ಯ ಸಹಾಯಕರು ಸೇವೆಗೆ ಲಭ್ಯವಿರುತ್ತಾರೆ. ಮಂಗಳವಾರ ಪಾರಂಪಳ್ಳಿ ಉಪಕೇಂದ್ರ ಹಾಗೂ ಬುಧವಾರ ಗುಂಡ್ಮಿ ಉಪಕೇಂದ್ರಕ್ಕೆ ಹಿರಿಯ ವೈದ್ಯರು ಭೇಟಿ ನೀಡುತ್ತಾರೆ.
Advertisement
ಪ್ರಮುಖ ಸಮಸ್ಯೆಗಳುಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ಗುಂಡ್ಮಿ, ಪಾರಂಪಳ್ಳಿ ಉಪಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸಾಸ್ತಾನ ಆರೋಗ್ಯ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ತುರ್ತು ಸಂದರ್ಭದಲ್ಲಿ ರೋಗಿಗಳ ದಾಖಲಾತಿ, ಚಿಕಿತ್ಸೆ ಕಷ್ಟವಾಗುತ್ತಿದೆ. ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಇಲ್ಲಿನ ಖಾಯಂ ವೈದ್ಯರು ಬೇರೆ ಕಡೆಗೆ ನಿಯೋಜನೆಗೊಂಡಿರುವುದರಿಂದ ಸಾಲಿಗ್ರಾಮ ಕೇಂದ್ರದ ವೈದ್ಯಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಿ, ಗುತ್ತಿಗೆ ಆಧಾರದ ವೈದ್ಯೆಯೋರ್ವರ ಮೂಲಕ ಸೇವೆ ನೀಡಲಾಗುತ್ತಿದೆ ಜತೆಗೆ ಮೂಡಹಡು ಹಾಗೂ ಹಂಗಾರಕಟ್ಟೆಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಸೌಲಭ್ಯ ಏನೇನಿವೆ?
ಎರಡೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳ ಪರೀಕ್ಷೆ, ರಕ್ತ, ಮೂತ್ರದ ಪರೀಕ್ಷೆ ನಡೆಸಲು ಪ್ರಯೋಗಾಲಯ ಸಿದ್ಧವಿದೆ. ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ 6 ಬೆಡ್‌ಗಳ ಕೊಠಡಿ ಸೌಲಭ್ಯವಿದೆ. ಮಲೇರಿಯಾ,ಡೆಂಗ್ಯು ಮುಂತಾದ ಸಾಂಕ್ರಾಮಿಕ ಖಾಯಿಲೆಗಳಿಗೆ ಔಷಧ ಸಂಗ್ರಹವಿದೆ. ಸ್ವಚ್ಚತೆಗೆ ಹೆಚ್ಚು ಗಮನ ನೀಡಿ
ಮಳೆಗಾಲದಲ್ಲಿ ಮನೆ ಹಾಗೂ ಪರಿಸರದ ಸುತ್ತಮುತ್ತ ಸ್ವಚ್ಚತೆಗೆ ಹೆಚ್ಚು ಗಮನ ನೀಡಬೇಕು ಹಾಗೂ ವೈಯಕ್ತಿಕ ಸ್ವಚ್ಚತೆ ಕುರಿತು ಗಮನಹರಿಸಬೇಕು. ಜ್ವರ ಕಾಣಿಸಿಕೊಂಡಾಗ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಸೇವೆ ನೀಡಲಾಗುತ್ತದೆ.
– ರಾಘವೇಂದ್ರ ರಾವ್, ವೈದ್ಯಾಧಿಕಾರಿ ಪ್ರಾ.ಆ.ಕೇ. ಸಾಲಿಗ್ರಾಮ — ರಾಜೇಶ ಗಾಣಿಗ ಅಚ್ಲಾಡಿ