Advertisement
ರಾಜ್ಯದ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ರೂಪುರೇಷೆ ಸಿದ್ಧಪಡಿಸಿದ್ದ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಇದೀಗ ಜೈಲಿನ ಉತ್ಪನ್ನಗಳನ್ನು ಪೊಲೀಸ್ ಇಲಾಖೆಯ ಕ್ಯಾಂಟಿನ್‌ಗಳಲ್ಲಿ ಮಾರಾಟಕ್ಕೆ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದೆ.
Related Articles
Advertisement
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಪೊಲೀಸ್ ಇಲಾಖೆ, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್ ಕ್ಯಾಂಟೀನ್‌ಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕಾಲ ಸಂಗ್ರಹಿಸಿ ಇಡಬಹುದಾದ ಬೇಕರಿಯ ಬ್ರೇಡ್, ರಸ್ಕ್, ಖಾರ ಮತ್ತು ಸಿಹಿ ಬೆಣ್ಣೆ ಬಿಸ್ಕೆಟ್‌ಗಳು ಸೇರಿ ಆರೇಳು ರೀತಿಯ ತಿನಿಸುಗಳು ಹಾಗೂ ಕೈಮಗ್ಗದ ಶರ್ಟ್‌ಗಳು (ಅರ್ಥ ತೋಳಿನ, ಪೂರ್ಣ ತೋಳಿನ) ಟಿ-ಶರ್ಟ್, ಟವಲ್, ಲುಂಗಿ, ಬೆಡ್‌ಶೀಟ್‌ಗಳು, ಕರವಸ್ತ್ರಗಳು, ಫಿನಾಯಿಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಾರಾಗೃಹ ಇಲಾಖೆಗೆ ಆದಾಯ ಹೆಚ್ಚಳವಾಗಿದೆ.
ಇದೇ ವೇಳೆ ಜೈಲಿನಲ್ಲಿ ತಯಾರಿಸುವ ಕಬ್ಬಿಣದ ಉಪಕರಣಗಳಾದ ಫರ್ನಿಚರ್‌ಗಳಿಗೆ ಕೋರ್ಟ್ ಗಳಿಂದ ಉತ್ತಮ ಬೇಡಿಕೆ ಇದ್ದು, ಅವುಗಳನ್ನು ಬೇಡಿ ಕೆಗೆ ಅನುಗುಣವಾಗಿ ತಯಾರಿಸಿ ಮಾರಾಟ ಮಾಡ ಲಾಗುತ್ತಿದೆ. ಜತೆಗೆ ಕೆಲ ಆಸ್ಪತ್ರೆಗಳಿಗೆ ಬೇಕಾಗುವ ಕಬ್ಬಿಣದ ಬೆಡ್‌ಗಳು ಮತ್ತು ಪಕ್ಕದಲ್ಲಿ ಔಷಧಿಗಳು ಇಡುವ ಫರ್ನಿಚರ್‌ಗಳನ್ನು ಮಾರಾಟ ಮಾಡಲಾ ಗುತ್ತಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಕೆಎಸ್‌ಆರ್‌ಪಿಯಲ್ಲೂ ಬೇಕರಿಗಳಿವೆ. ಆದರೆ, ಎಲ್ಲ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ತಮ್ಮ ತಯಾರಿಸದ ಆಹಾರ ಪದಾರ್ಥಗಳನ್ನು ಬೇಡಿಕೆಗೆ ಅನುಸಾರವಾಗಿ ಪಡೆಯಲಾಗಿದೆ. ಜತೆಗೆ ಡಿಎಆರ್ ಮತ್ತು ಸಿಎಆರ್ ಕ್ಯಾಂಟೀನ್‌ಗಳಲ್ಲಿ ಎಲ್ಲ ಉತ್ಪನ್ನಗಳ ಮಾರಲಾಗುತ್ತಿದೆ. ಹೆಚ್ಚಾಗಿ ಶರ್ಟ್‌ಗಳು, ಕರವಸ್ತ್ರ, ಫಿನಾಯಿಲ್, ಟಿ-ಶರ್ಟ್‌ಗಳಿಗೆ ಉತ್ತಮ ಬೇಡಿಕೆ ಇದೆ ಎಂದು ಕೆಎಸ್‌ಆರ್‌ಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
– ಮೋಹನ್ ಭದ್ರಾವತಿ