Advertisement

ಹೊಸ ವರ್ಷಕ್ಕೆ ಸಲಗ ಟೈಟಲ್‌ ಟ್ರ್ಯಾಕ್‌

03:30 PM Dec 07, 2020 | Suhan S |

ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ “ಸಲಗ’ ಚಿತ್ರದ “ಸೂರಿಯಣ್ಣ …’ ಹಾಡು ಮಾಸ್‌ ಪ್ರಿಯರ ಮನ ಗೆದ್ದಿದೆ. ಈಗ ಚಿತ್ರತಂಡ ಮತ್ತೂಂದು ಹಾಡು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಆದರೆ, ಅದು ಈ ವರ್ಷದಲ್ಲಿ ಅಲ್ಲ, ಬದಲಾಗಿ ಮುಂದಿನ ವರ್ಷ, ಅಂದರೆ ಜನವರಿಯಲ್ಲಿ.

Advertisement

ಹೌದು, “ಸಲಗ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಹೊಸ ವರ್ಷಕ್ಕೆ ಬಿಡುಗಡೆಯಾಗಲಿದೆ. ಮಲೇಷಿಯನ್‌ ರ್ಯಾಪರ್‌ ಯೋಗಿ ಹಾಡಿರುವ ಈ ಹಾಡನ್ನು ಹೊಸ ವರ್ಷಕ್ಕೆ ರಿಲೀಸ್‌ ಮಾಡಿ, ಮತ್ತಷ್ಟು ಜೋಶ್‌ ತುಂಬಲು ಚಿತ್ರತಂಡ ಮುಂದಾಗಿದೆ. ಈ ಹಾಡಿಗೆ ನಾಗಾರ್ಜುನ ಎಲ್ಲಾ ಓಕೆ, ಚಿತ್ರ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದಕ್ಕೆ ಉತ್ತರ ಫೆಬ್ರವರಿ. “ಸಲಗ’ ಚಿತ್ರವನ್ನು ಫೆಬ್ರವರಿ ಮೂರನೇ ವಾರದಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ರಾನ್‌ ಮಾಡಿಕೊಂಡಿದೆ.

ಇದನ್ನೂ ಓದಿ : ಮನರಂಜನಾ ಕ್ಷೇತ್ರಕ್ಕೆ ಡಾ.ಕಾಮಿನಿ ರಾವ್‌

“ಸಲಗ’ ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಾಣ ಮಾಡಿದ್ದು, ಅವರ ನಿರ್ಮಾಣದ “ಟಗರು’ ಚಿತ್ರ ಕೂಡಾ ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಯಶಸ್ಸುಕಂಡಿತ್ತು. ಇನ್ನು ವಿಜಯ್‌ ಅವರ “ದುನಿಯಾ’ಕೂಡಾ ಫೆಬ್ರವರಿಯಲ್ಲೇ ತೆರೆಕಂಡಿದ್ದು. ಈಗ ವಿಜಯ್‌ ಹಾಗೂ ಶ್ರೀಕಾಂತ್‌ ಜೊತೆಯಾಗಿ ಮಾಡಿರುವ “ಸಲಗ’ಚಿತ್ರವನ್ನು ಕೂಡಾ ಫೆಬ್ರವರಿಯಲ್ಲೇ ತೆರೆಗೆ ತರಲು ನಿರ್ಧರಿಸಲಾಗಿದೆ.

ಮೂರು ವಾರಗಳ ಗ್ಯಾಪ್‌ನಲ್ಲಿ ಸ್ಟಾರ್‌ ಸಿನಿಮಾ :

Advertisement

ಈಗಷ್ಟೇ ಚೇತರಿಕೆ ಕಾಣುತ್ತಿರುವ ಕನ್ನಡ ಚಿತ್ರರಂಗ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. ಅನಾವಶ್ಯಕ ಸ್ಪರ್ಧೆಗೆ ಬಿದ್ದು, ನಷ್ಟ ಮಾಡಿಕೊಳ್ಳಬಾರದೆಂಬ ನಿರ್ಧಾರಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಸಕ್ರಿಯ ನಿರ್ಮಾಪರ ಕೂಟ ಒಂದು ತೀರ್ಮಾನಕ್ಕೆ ಬಂದಿದ್ದು, ಒಂದು ಸ್ಟಾರ್‌ ಸಿನಿಮಾ ರಿಲೀಸ್‌ ಆಗಿ ಮೂರುಗಳ ನಂತರ ಇನ್ನೊಂದು ಸ್ಟಾರ್‌ ಚಿತ್ರ ರಿಲೀಸ್‌ ಆಗಬೇಕು. ಅದಕ್ಕಿಂತ ಮುಂಚೆ ಯಾರೂ ಬಿಡುಗಡೆ ಮಾಡಬಾರದೆಂದು ನಿರ್ಧರಿಸಿದೆ. ಈ ಮೂಲಕ ಚಿತ್ರ ಬಿಡುಗಡೆ ಸಮಯದಲ್ಲಿ ಸಹಜವಾಗಿ ಎದುರಾಗುತ್ತಿದ್ದ ಚಿತ್ರಮಂದಿರಗಳ ಗೊಂದಲಕ್ಕೂ ತೆರೆಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next