ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ʼಸಲಾರ್ʼ ವರ್ಲ್ಡ್ ವೈಡ್ ಮೋಡಿ ಮಾಡಿದೆ. ಎಲ್ಲೆಡೆ ಪ್ರಶಾಂತ್ ನೀಲ್ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಇತ್ತ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ʼಸಲಾರ್ʼ ಹಿಂದೆ ಬಿದ್ದಿಲ್ಲ.
ʼಸಲಾರ್ʼ ನಲ್ಲಿ ಭರ್ಜರಿ ಮಾಸ್ ಅಂಶಗಳಿವೆ. ಈ ಕಾರಣದಿಂದ ಮಾಸ್ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ವರದರಾಜ ಮನ್ನಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಭಾಸ್ ʼದೇವʼನಾಗಿ ಕಾಣಿಸಿಕೊಂಡಿದ್ದಾರೆ. ಖಾನ್ಸರ್ ಕೋಟೆಯಲ್ಲಿ ನಡೆಯುವ ಕಥೆಯನ್ನು ನೀಲ್ ಆ್ಯಕ್ಷನ್ ವೇಯಲ್ಲಿ ಹೇಳಿದ್ದಾರೆ.
ʼಕದನ ವಿರಾಮʼವೆಂದು ಮೊದಲ ಭಾಗಕ್ಕೆ ಹೆಸರಿಟ್ಟಿದ್ದು, ಎರಡನೇ ಭಾಗದಲ್ಲಿ ಮತ್ತೊಂದು ಮಾಸ್ ಜರ್ನಿಯ ಸ್ಟೋರಿಯನ್ನು ಇಟ್ಟಿದ್ದಾರೆ.
ಮೊದಲ ದಿನ ಪ್ರಭಾಸ್ ಅಭಿನಯದ “ಸಲಾರ್: ಪಾರ್ಟ್ 1 – ಸೀಸ್ ಫೈರ್ ” ಮೊದಲ ದಿನ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 178.7 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 90 ಕೋಟಿ ರೂ.ಗಳಿಸಿತು. ಎರಡನೇ ದಿನ ಭಾರತದ ಗಳಿಕೆಯಲ್ಲಿ ಕುಸಿತ ಕಂಡು ಬಂದಿದ್ದು, 55 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆ ಮೂಲಕ 145.70 ಕೋಟಿ ರೂ. ಗಳಿಸಿದೆ. ಭಾರತದಲ್ಲಿ ಸಿನಿಮಾ 200 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡುವ ಸಾಧ್ಯತೆಯಿದೆ.
ಬಾಲಿವುಡ್ ನ ʼಡಂಕಿʼ ಸಿನಿಮಾ ಕೂಡ ʼಸಲಾರ್ʼ ಜೊತೆ ಪೈಪೋಟಿಯಾಗಿ ರಿಲೀಸ್ ಆಗಿದೆ.