Advertisement

ʼಸಲಾರ್‌ʼ ರಿಲೀಸ್‌ ಡೇಟ್‌ ಪ್ರಕಟ: ಪ್ರೇಕ್ಷಕರಿಗೆ ಪ್ರಶಾಂತ್‌ ನೀಲ್‌ ಕೊಟ್ರು ಸರ್ಪ್ರೈಸ್‌

03:24 PM Aug 15, 2022 | Team Udayavani |

ಹೈದರಾಬಾದ್:ಪ್ರಶಾಂತ್ ನೀಲ್ ನಿರ್ದೇಶನದ  ಮತ್ತೊಂದು ಬಿಗ್‌ ಬಜೆಟ್‌ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ಪ್ರೇಕ್ಷಕರಿಗೆ ದೊಡ್ಡ ಅಪ್‌ ಡೇಟ್‌ ನೀಡಿದೆ.

Advertisement

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ‘ಸಲಾರ್’ ಮೊನ್ನೆಯಷ್ಟೇ  ಹೊಸ ಪೋಸ್ಟರ್ ಹಾಕಿ ಆ.15 ರಂದು ಚಿತ್ರದ ಕುರಿತು ದೊಡ್ಡ ಅನೌನ್ಸ್ ಮೆಂಟ್ ಮಾಡುತ್ತೇವೆ ಎಂದಿತ್ತು. ಇಂದು ಬಿಗ್ ಅಪ್ ಡೇಟ್ ನೀಡಿದೆ.

ಪ್ರಭಾಸ್‌ ಅವರ ‘ಬಾಹುಬಲಿ’ ಬಳಿಕ ‘ಸಾಹೋ’ ರಾಧೆ ಶ್ಯಾಮ್’ ಸಿನಿಮಾಗಳು ಹೇಳುವಷ್ಟು ಸದ್ದು ಮಾಡಿಲ್ಲ. ಕೆಜಿಎಫ್ -2 ಯಶಸ್ಸಿನ ನಂತರ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ದೊಡ್ಡ ಚಿತ್ರ ಇದಾಗಿರುವುದರಿಂದ ‘ಸಲಾರ್’ ಬಗ್ಗೆ ನಿರೀಕ್ಷೆ ಹೆಚ್ಚೇ ಇದೆ.

ಚಿತ್ರ ತಂಡ ಹೊಸ ಪೋಸ್ಟರ್ ಹಂಚಿಕೊಂಡು, ‘ರೆಬೆಲಿಂಗ್ ವರ್ಲ್ಡ್ ವೈಡ್  ಸೆ.28 2023’ ಎಂದು ಉಲ್ಲೇಖಿಸುವ ಮೂಲಕ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.  ಇದರೊಂದಿಗೆ ನಾಯಕ ನಟ ಪ್ರಭಾಸ್ ಕೂಡ ಪೋಸ್ಟರ್ ಹಂಚಿಕೊಂಡಿದ್ದಾರೆ.

ಔಟ್‌ & ಔಟ್‌ ಮಾಸ್‌ ಎಲಿಮೆಂಟ್‌ ಗಳನ್ನೊಳಗೊಂಡ ʼಸಲಾರ್‌ʼ ನಲ್ಲಿ ಶ್ರುತಿ ಹಾಸನ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ʼಕೆಜಿಎಫ್‌ʼ ಮ್ಯೂಸಿಕ್‌ ಮಾಂತ್ರಿಕ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಇದರೊಂದಿಗೆ ಭುವನ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next