Advertisement

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

03:32 PM Oct 24, 2024 | Team Udayavani |

ಹೈದರಾಬಾದ್:‌ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ʼಸಲಾರ್‌ʼ (Salaar) ಸಿನಿಮಾದ ಸೀಕ್ವೆಲ್‌ ಬಗ್ಗೆ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ʼಸಲಾರ್‌ʼ ನೋಡಿದ ಪ್ರೇಕ್ಷಕರು ಸಿನಿಮಾದ ಎರಡನೇ ಭಾಗಕ್ಕಾಗಿ ಕಾಯುತ್ತಿದ್ದಾರೆ.

Advertisement

ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್‌ (Prabhas) ,ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.  ʼಸಲಾರ್‌ʼ ವರ್ಲ್ಡ್‌ ವೈಡ್‌ ಬಾಕ್ಸ್‌ ಆಫೀಸ್‌ ನಲ್ಲಿ ʼಸಲಾರ್‌ʼ 617 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿತು.

ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼ ಹೊಸ ರಿಲೀಸ್‌ ಡೇಟ್‌ ಅನೌನ್ಸ್  

ನಿನ್ನೆಯಷ್ಟೇ (ಅ.23ರಂದು) ಪ್ರಭಾಸ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಮುಂದಿನ ಸಿನಿಮಾ ʼರಾಜಾಸಾಬ್‌ʼ ಸಿನಿಮಾದ ಮೋಷನ್‌ ಪಿಕ್ಚರ್‌ ರಿಲೀಸ್‌ ಆಗಿದೆ. ಇದೇ ವೇಳೆ ʼಸಲಾರ್: ಭಾಗ 2 – ಶೌರ್ಯಾಂಗ ಪರ್ವಂʼ( Salaar: Part 2 – Shouryaanga Parvam) ಕುರಿತಾದ ಅಪ್ಡೇಟ್‌ ಕೂಡ ಹೊರಬಿದ್ದಿದೆ.

Advertisement

ʼಸಲಾರ್‌ -2ʼ ಶೂಟಿಂಗ್‌ ಆರಂಭವಾಗಿದೆ. 20 ದಿನಗಳ ಈ ಶೂಟಿಂಗ್‌ ಶೆಡ್ಯೂಲ್‌ನಲ್ಲಿ ಪ್ರಭಾಸ್‌ ಶೀಘ್ರದಲ್ಲಿ ಭಾಗಿಯಾಗಲಿದ್ದಾರೆ ಎಂದು  ಖ್ಯಾತ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್‌ ಮಾಡಿದ್ದಾರೆ. ಮೂಲಗಳ ಪ್ರಕಾರ 20 ದಿನಗಳ ಈ ಶೆಡ್ಯೂಲ್‌ ನಲ್ಲಿ ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

ಇದನ್ನು ಕೇಳಿ ಪ್ರಭಾಸ್‌ ಫ್ಯಾನ್ಸ್‌ಗಳು ಖುಷ್‌ ಆಗಿದ್ದಾರೆ. ಆದರೆ ಇದುವರೆಗೆ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನು ಸಲಾರ್‌ -2 ನಲ್ಲಿ ಪ್ರಭಾಸ್ ಜತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಶ್ರೀಯಾ ರೆಡ್ಡಿ, ಜಗಪತಿ ಬಾಬು ಮತ್ತು ಇತರರು ಇರಲಿದ್ದಾರೆ. 2025ರಲ್ಲಿ ರಿಲೀಸ್‌ ಆಗುವ ಸಾಧ್ಯತೆಯಿದೆ.

ಸದ್ಯ ಪ್ರಭಾಸ್‌ ʼರಾಜಾಸಾಬ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ಸಂದೀಪ್‌ ವಂಗಾ ಅವರ ʼಸ್ಪಿರಿಟ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next