Advertisement

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ಟ್ರೇಲರ್‌

02:13 PM Oct 22, 2021 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹಾರರ್‌-ಥ್ರಿಲ್ಲರ್‌ ಕಥಾಹಂದರವಿರುವ “ಸಕೂಚಿ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. “ದಿಯಾ’ ಖ್ಯಾತಿಯ ನಟಿ ಖುಷಿ ರವಿ, ನಿರ್ದೇಶಕ ಮಹೇಶ್‌ ಬಾಬು ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರ ಸಮ್ಮುಖದಲ್ಲಿ “ಸಕೂಚಿ’ ಚಿತ್ರದ ಟ್ರೇಲರ್‌ ಹೊರಬಂದಿತು.

Advertisement

“ಸಕೂಚಿ’ ಚಿತ್ರದಲ್ಲಿ ತ್ರಿವಿಕ್ರಮ ನಾಯಕನಾಗಿ, ಡಯಾನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಡಾಲಿ ರಾಜೇಶ್‌, ಸುಕುಮಾರ್‌, ಸುಮನರಾವ್‌, ಸಂಜಯ್‌ ರಾಜ್‌, ಅಶೋಕ್‌ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿ.ಸಿ ಅಶ್ವಿ‌ನ್‌ ನಿರ್ಮಾಣದ ಈ ಚಿತ್ರಕ್ಕೆ ಅಶೋಕ್‌ ಎಸ್‌. ಕಥೆ, ಚಿತ್ರಕಥೆ  ಬರೆದು ನಿರ್ದೇಶನ ಮಾಡಿದ್ದಾರೆ.

ಇದೇ ವೇಳೆ “ಸಕೂಚಿ’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅಶೋಕ್‌ ಎಸ್‌, “ಭಾರೀ ಸಿಡಿಲಿನ ಭಯಂಕರ ಶಬ್ದ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದಾಗ ಹುಟ್ಟಿಕೊಂಡ ಕಥೆ ಇದು. “ಸಕೂಚಿ’ ಅನ್ನೋದು ಪ್ರೇತಾತ್ಮಗಳಿಗೆ ಪ್ರೇತಾತ್ಮ. ಇದೊಂದು ಪ್ರಯೋಗ. ಅದನ್ನು ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು.

ಇದನ್ನೂ ಓದಿ:ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

“ಮೇಲ್ನೋಟಕ್ಕೆ “ಸಕೂಚಿ’ ಹಾರರ್‌-ಥ್ರಿಲ್ಲರ್‌ ಸಿನಿಮಾದಂತೆ ಕಂಡರೂ ಇದರಲ್ಲಿ ಲವ್‌, ಎಮೋಶನ್ಸ್‌ ಎಲ್ಲವನ್ನೂ ಮನಮುಟ್ಟುವಂತೆ ಹೇಳಿದ್ದೇವೆ’ ಅನ್ನೋದು ಚಿತ್ರತಂಡ ಮಾತು. ಚಿತ್ರದ ಹಾಡುಗಳಿಗೆ ಗಣೇಶ್‌ ಗೋವಿಂದಸ್ವಾಮಿ ಸಂಗೀತ ಸಂಯೋಜಿಸಿದ್ದು, ಹೃದಯಶಿವ ಸಾಹಿತ್ಯವಿದೆ. ಚಿತ್ರಕ್ಕೆ ಆನಂದ್‌ ಸುಂದರೇಶ್‌ ಛಾಯಾಗ್ರಹಣ, ಮಹೇಶ್‌ ತೊಗಟ ಸಂಕಲನವಿದೆ. ಚಿತ್ರಕ್ಕೆ ಆನಂದ್‌ ಯಡಿಯೂರು ನೃತ್ಯ ಮತ್ತು ಕುಂಫ‌ು ಚಂದ್ರು ಸಾಹಸ ಸಂಯೋಜಿಸಿದ್ದಾರೆ. “ಸಕೂಚಿ’ ಚಿತ್ರದ ಶೀರ್ಷಿಕೆಗೆ “ಸಾವಿನ ಸೂಚಿ’ ಎಂಬ ಅಡಿಬರಹವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next