Advertisement
ಶನಿವಾರ ತಾಲೂಕಿನ ಗಡಿಗ್ರಾಮ ವಾಟೆಹಳ್ಳಿ ಸಮೀಪದ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆದ ಪಕ್ಷದ ಕೋರ್ ಸಮಿತಿ ಸಭೆಯಲ್ಲಿ ಮಾಜಿ ಶಾ ಸಕ ಎಚ್.ಎಂ ವಿಶ್ವನಾಥ್ ಚುನಾವಣೆ ಎದುರಿಸಲು ಕಾರ್ಯಕರ್ತರಲ್ಲಿ ಗೊಂದಲವಾಗುತ್ತಿದೆ. ಇಬ್ಬರು ಪ್ರಬಲ ಅಕಾಂಕ್ಷಿಗಳು ಸರಿಯಾದ ದಿಕ್ಕಿನಲ್ಲಿ ಹೋ ಗುತ್ತಿಲ್ಲ, ಸಿಮೆಂಟ್ ಮಂಜುನಾಥ್ ಅರಕಲಗೂಡಿ ನವರಾಗಿದ್ದಾರೆ. ನಾರ್ವೆ ಸೋಮಶೇಖರ್ ಬೆಂಗಳೂರಿನವರಾಗಿದ್ದಾರೆ, ಸ್ಥಳೀಯವಾಗಿ ಪ್ರಬಲ ಅಭ್ಯರ್ಥಿಗಳಿಲ್ಲದ ಕಾರಣ ಈ ರೀತಿ ಆಗುತ್ತಿದೆ ಎಂದಿದ್ದಾರೆ.
Related Articles
Advertisement
ಸ್ವಪಕ್ಷದಲ್ಲೇ ಮಂಜು ವೇಗಕ್ಕೆ ಕಡಿವಾಣ: ಈ ನಡುವೆ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್‌ರವರ ಹಿಂಬಾಲಕರ ಸಿಮೆಂಟ್ ಮಂಜು ವಿರುದ್ಧದ ನಡೆ ಬಿಜೆಪಿಯಲ್ಲಿ ಮತ್ತಷ್ಟು ಗೊಂದಲ ಹುಟ್ಟು ಹಾಕಿದೆ. ಕ್ಷೇತ್ರದಲ್ಲಿ ಬಿರುಸಾಗಿ ತಳಮಟ್ಟದಲ್ಲಿ ಪಕ್ಷ ಸಂಘಟಿಸುತ್ತಿದ್ದ ಸಿಮೆಂಟ್ ಮಂಜು ಅವರ ವೇಗಕ್ಕೆ ಸ್ವಪಕ್ಷೀಯ ಮುಖಂಡರೆ ಬ್ರೇಕ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಬೇಕಾಗಿದ್ದ ತಾಲೂಕು ಅಧ್ಯಕ್ಷರು ಸಹ ಗುಂಪುಗಾರಿಕೆ ಮಾಡುತ್ತಿದ್ದು, ತಮ್ಮ ಹಿಂಬಾಲಕರಿಗೆ ಪಕ್ಷದಲ್ಲಿ ಎರಡೆರಡು ಹುದ್ದೆಗಳನ್ನು ನೀಡಿದ್ದಾರೆ ಎಂದು ಪಕ್ಷದ ಕೆಲವು ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.
ವಿಪಕ್ಷಗಳಿಗೆ ಲಾಭ ತರಲಿದೆ ಒಳ ಜಗಳ: ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಸಂಘಟಿಸಬೇಕಾಗಿದ್ದ ತಾಲೂಕು ಅಧ್ಯಕ್ಷರು ಕಾರ್ಯಕರ್ತರಿಗೆ ಹುಮ್ಮಸ್ಸು ತರುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಸಕಲೇಶಪುರವು ಒಂದಾಗಿದೆ. ಆದರೆ ಪಕ್ಷದ ಮುಖಂಡರ ನಿರ್ಲಕ್ಷ್ಯ ದಿಂದಲೆ ಕ್ಷೇತ್ರ ಮತ್ತೂಮ್ಮೆ ಕಳೆದಕೊಳ್ಳುವುದರಲ್ಲಿ ಅನುಮಾನವಿಲ್ಲದಾಗಿದೆ. ಪಕ್ಷದ ಒಳಜಗಳಗಳನ್ನು ಸರಿ ಪಡಿಸಿ, ಮುಖಂಡರ ನಡುವೆ ಒಮ್ಮತ ಮೂಡಿಸಬೇಕಾಗಿರುವ ಪಕ್ಷದ ವರಿಷ್ಠರು ಇತ್ತ ತಲೆ ಹಾಕುತ್ತಿಲ್ಲ. ಮೂರು ಬಾರಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿರುವ ಹಾಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರ ಕಾರ್ಯವೈಖರಿ ಕುರಿತು ಕ್ಷೇತ್ರದ ಜನರಿಗೆ ಒಳ್ಳೆಯ ಅಭಿಪ್ರಾಯವಿಲ್ಲದಿದ್ದರು ಸಹ ಬಿಜೆಪಿ ಮತ್ತು ಕಾಂಗ್ರೆಸ್ ಒಳ ಜಗಳ ಜೆಡಿಎಸ್‌ಗೆ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಒಕ್ಕಲಿಗರ ಆಕ್ರೋಶಕ್ಕೆ ವಿಚಲಿತರಾದ್ರ ಸಿಮೆಂಟ್ ಮಂಜು?: ಒಕ್ಕಲಿಗ ಸಮುದಾಯ ಯಾವಾಗ ತಮ್ಮ ವಿರುದ್ಧ ತಿರುಗಿ ಬೀಳುತ್ತೆ ಅಂತ ತಿಳಿಯಿತೋ ಇದರಿಂದ ಆತಂಕಕ್ಕೆ ಸಿಲುಕಿದ ಸಿಮೆಂಟ್ ಮಂಜುನಾಥ್, ವಿಶ್ವನಾಥ್ ಅವರು ಪಕ್ಷದ ಹಿರಿಯರಾಗಿದ್ದು, ಒಕ್ಕಲಿಗ ಸಮಯದಾಯದ ಪ್ರಬಲ ಮುಖಂಡರಾಗಿದ್ದಾರೆ. ಅವರು ರಾಜಕೀಯದಲ್ಲಿ ನನ್ನ ಗುರುಗಳಾಗಿದ್ದು, ನಾನು ಅವರನ್ನು ಯಾವುದೆ ರೀತಿಯಲ್ಲಿ ನಿಂದಿಸಿಲ್ಲ. ಅವರು ನನಗೆ ಅರಕಲಗೂಡಿ ನವನೆಂದು ಹೇಳಿದಕ್ಕೆ, ನಾನು ಇದೇ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದೇನೆ ಎಂದು ಉತ್ತರ ನೀಡಿದ್ದೇನೆ. ಅದು ಬಿಟ್ಟರೆ ಬೇರೆ ಯಾವ ಘಟನೆಯು ನಡೆದಿಲ್ಲ, ಕೋರ್ ಸಮಿತಿ ಸಭೆಯಲ್ಲಿ ಒಟ್ಟು 12 ಮಂದಿ ಸೇರಿದ್ದು ಯಾರಿಗೆ ಬೇಕಾದರು ಈ ಕುರಿತು ಕೇಳಬಹುದು. ನಾನು ಇಲ್ಲಿಯವರೆಗೆ ಯಾವುದೆ ಜನಾಂಗಕ್ಕೆ ನೋವಾಗದಂತೆ ನಡೆದುಕೊಂಡು ಬಂದಿದ್ದೇನೆ. ವಿಶ್ವನಾಥ್ ಅವರಿಗೆ ನನ್ನ ನುಡಿಯಿಂದ ನೋವುಂಟಾಗಿದ್ದರೆ ಈ ಕುರಿತು ನಾನು ಅವರಿಗೆ ಕ್ಷಮೆ ಕೋರುತ್ತೇನೆ ಎಂದು ಬಹಿರಂಗವಾಗಿ ವಿಡಿಯೋ ಹೇಳಿಕೆ ಕೊಟ್ಟಿದ್ದಾರೆ.
–ಸುಧೀರ್ ಎಸ್.ಎಲ್