Advertisement

ಸಕಾಲ ಸೇವಾ ಆಯೋಗ ಸ್ಥಾಪನೆ: ಸಚಿವ ಸುರೇಶ್‌ ಕುಮಾರ್‌

08:13 AM Dec 05, 2020 | mahesh |

ಬೆಂಗಳೂರು: ಸಕಾಲ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮತ್ತು ಉತ್ತರದಾಯಿತ್ವವಾದ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಕಾಲ ಸೇವಾ ಆಯೋಗವನ್ನು ರಚಿಸಲು ಚಿಂತಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಹಾಗೂ ಸಕಾಲ ಮಿಷನ್‌ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

Advertisement

ಶುಕ್ರವಾರ ಸಕಾಲ, ಗ್ರಾಮ-ಒನ್‌, ಜನಸೇವಕ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಿಂದಲೂ ಸಕಾಲ ಸೇವೆಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಅತಿ ಶೀಘ್ರದಲ್ಲಿ ರೂಪಿಸಲಾಗುವುದು. ಇದಕ್ಕಾಗಿ ಸಾರ್ವಜನಿಕ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳ ಸೇವೆಯನ್ನ ಬಳಸಿಕೊಂಡು ಜನಸಾಮಾನ್ಯರಲ್ಲಿ ಈ ಯೋಜನೆ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುವುದು ಎಂದರು.

ಸಕಾಲ ಸೇವೆಗಳಿಗೆ ಸಂಬಂಧಿಸಿ ನಾಗರಿಕ ಕೇಂದ್ರಿತ ವ್ಯವಸ್ಥೆ ರೂಪಣೆ, ಶಿಕ್ಷಣ, ಸಂಪರ್ಕ ಬೆಂಬಲ, ದೂರು ದುಮ್ಮಾನ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವ್ಯವಸ್ಥೆ, ನಿರ್ವಹಣ ಮಾಹಿತಿ ವ್ಯವಸ್ಥೆ, ಜ್ಞಾನ ನಿರ್ವಹಣ ವ್ಯವಸ್ಥೆ, ಜಾಗೃತ ದಳ ರಚನೆ, ತಾಂತ್ರಿಕ ಘಟಕ ರಚನೆ, ಸಮನ್ವಯ ಘಟಕ, ತರಬೇತಿ ಘಟಕ, ಕಕ್ಷಿದಾರರ ಸೇವೆ, ಆಡಳಿತ ಘಟಕಗಳನ್ನು ರೂಪಿಸಲಾಗುವುದು ಎಂದರು.

ಜನಸೇವಕ ಪುನರಾರಂಭ
ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಜನಸೇವಕ ಯೋಜನೆಗಳನ್ನು ಶೀಘ್ರದಲ್ಲಿ ಪುನ ರಾರಂಭಗೊಳಿಸಲಾಗುವುದು. ಸರಕಾರವು ದಾವಣ ಗೆರೆ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಗ್ರಾಮ-1 ಸೇವೆಗಳನ್ನು ರಾಜ್ಯದೆಲ್ಲೆಡೆ ವಿಸ್ತರಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು. ಇ-ಆಡಳಿತ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಸಕಾಲ ಮಿಷನ್‌ ನಿರ್ದೇ ಶಕಿ ಡಾ| ಬಿ. ಆರ್‌. ಮಮತಾ, ಸೇವಾ ಸಿಂಧು ನಿರ್ದೇಶಕಿ ಸಿಂಧೂ, ವರಪ್ರಸಾದ ರೆಡ್ಡಿ, ಮೇಘನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next