Advertisement
ಅವರು ಬುಧವಾರ ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ರಾಜ್ಯ ಸಕಾಲ ಮಿಷನ್ ಸಿಬಂದಿ ಮತ್ತು ಆಡಳಿತ ಹಾಗೂ ಸುಧಾರಣೆ ಇಲಾಖೆ ಮತ್ತು ದ.ಕ. ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಸಕಾಲ ಯೋಜನೆ ಕುರಿತು ಸಿಬಂದಿ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
ತಾನು ದೇಶದ ಸೇನೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಲಭಿಸಿದ ಭೂಮಿಯ ವ್ಯಾಜ್ಯದ ಕುರಿತು ಅಧಿಕಾರಿಗಳು ತನ್ನನ್ನು ಸತಾಯಿಸುತ್ತಿದ್ದಾರೆ ಎಂದು ಹತ್ಯಡ್ಕ ಗ್ರಾಮ ನಿವಾಸಿ, ನಿವೃತ್ತ ಸೈನಿಕ ಮೋಹನ ಶೆಟ್ಟಿ ಅವರು ಸಕಾಲ ಆಡಳಿತಾಧಿಕಾರಿಯವರ ಮುಂದೆ ತನ್ನ ನೋವನ್ನು ತೋಡಿಕೊಂಡರು. ಈ ಕುರಿತು ತಹಶೀಲ್ದಾರ್ ಜತೆ ಮುಖಾಮುಖಿ ಮಾತನಾಡಿ ಸಮಸ್ಯೆ ಬಗೆಹರಿಸೋಣ ಎಂದು ಆಡಳಿತಾಧಿಕಾರಿಯವರು ಭರವಸೆ ನೀಡಿದರು.
Advertisement
ಮೂಲತಃ ಬೆಳ್ತಂಗಡಿಯವರುರಾಜ್ಯ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಕೆ. ಮಥಾಯಿ ಅವರು ಮೂಲತಃ ಬೆಳ್ತಂಗಡಿಯ ಕಕ್ಕಿಂಜೆಯವರು. ಸಕಾಲದಲ್ಲಿ ಇಬ್ಬರು ನಿರ್ದೇಶಕರನ್ನು ಬಿಟ್ಟರೆ ಮಥಾಯಿ ಅವರದು ಪ್ರಮುಖ ಹುದ್ದೆಯಾಗಿದೆ. ಕಕ್ಕಿಂಜೆ, ಮಂಗಳೂರು ಹಾಗೂ ಉಜಿರೆಯಲ್ಲಿ ಶಿಕ್ಷಣ ಪಡೆದಿರುವ ಇವರು, ಕೆಪಿಟಿಯಲ್ಲಿ ಕಲಿಯುತ್ತಿರುವ ವೇಳೆಗೆ ಏರ್‌ಫೋರ್ಸ್‌ಗೆ ನೇಮಕಗೊಂಡಿದ್ದರು. ಅಲ್ಲಿ 18 ವರ್ಷಗಳ ಸೇವೆ ಸಲ್ಲಿಸಿ, ಬಳಿಕ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿದ್ದರು. 2006ರಲ್ಲಿ ಕೆಎಎಸ್‌ನಲ್ಲಿ ಉತ್ತೀರ್ಣರಾಗಿ ವಿವಿಧ ಜಿಲ್ಲೆಗಳ 7 ತಾಲೂಕುಗಳಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ, ಕಳೆದೆರಡು ವರ್ಷಗಳಿಂದ ಸಕಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತಾವನೆ ಇದೆ
ಸಕಾಲದಲ್ಲಿ ಸೇವೆಯ ವಿಳಂಬದ ಕುರಿತು ಪರಿಹಾರಕ್ಕೆ ಸಾರ್ವಜನಿಕರು ದೂರು ನೀಡುವ ಬದಲು ಸ್ವಯಂ ಪ್ರಕರಣ ದಾಖಲಿಸುವ ಕುರಿತು ಕಾನೂನು ತಿದ್ದುಪಡಿ ಹಾಗೂ ಗರಿಷ್ಠ ಪರಿಹಾರ ಮೊತ್ತವನ್ನು 500 ರೂ. ಬದಲು 25 ಸಾವಿರ ರೂ.ಗೆ ಏರಿಕೆ ಮಾಡುವ ಪ್ರಸ್ತಾವನೆ ಇದೆ.
– ಕೆ. ಮಥಾಯಿ
ರಾಜ್ಯ ಸಕಾಲ ಮಿಷನ್‌ನ
ಆಡಳಿತಾಧಿಕಾರಿ