Advertisement

ಅನಾರೋಗ್ಯ: ಸ್ವಿಸ್‌ ಕೂಟದಿಂದ ಹೊರಬಂದ ಸೈನಾ ನೆಹ್ವಾಲ್‌

12:30 AM Mar 15, 2019 | Team Udayavani |

ಬಾಸೆಲ್‌: ತೀವ್ರ ಜಠರ ಸಂಬಂಧಿತ ನೋವಿನಿಂದ  ಬಳಲುತ್ತಿದ್ದ ಸೈನಾ ನೆಹ್ವಾಲ್‌ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಿಂದ ಅರ್ಧದಿಂದಲೇ ಹೊರನಡೆದಿದ್ದಾರೆ. ಸೈನಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

Advertisement

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸೈನಾಗೆ ತುಂಬಾ ನೋವು ಕಂಡು ಬಂದಿದೆ. ಕೂಡಲೇ ಅವರನ್ನು ಸ್ವಿಸ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಜಠರ ನೋವಿನಿಂದ ಬಳಲುತ್ತಿರುವುದು ಕಂಡು ಬಂದಿದೆ. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ಸೈನಾಗೆ ವೈದ್ಯರು ಸೂಚಿಸಿದ್ದಾರೆ.

“ತುಂಬಾ ಬೇಸರವಾಗುತ್ತಿದೆ. ಹೊಟ್ಟೆನೋವಿನಿಂದಾಗಿ ಸ್ವಿಸ್‌ ಕೂಟವನ್ನು ಅರ್ಧದಲ್ಲೇ ಮೊಟಕುಗಳಿಸಿ ವಾಪಸ್‌ ಭಾರತಕ್ಕೆ ಬರುತ್ತಿದ್ದೇನೆ’ ಎಂದು ಸೈನಾ  ತಿಳಿಸಿದ್ದಾರೆ.ಸೈನಾ ಎರಡು ವಾರಗಳ ಹಿಂದೆ ನಡೆದಿದ್ದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ತನಕ ಪ್ರವೇಶ ಪಡೆದಿದ್ದರು. ಆ ವೇಳೆಯೇ ಅವರಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಿದ್ದರೂ ಅವರು ಉತ್ತಮ ಆಟ ಪ್ರದರ್ಶಿಸಿದ್ದರು.

“ಆಲ್‌ ಇಂಗ್ಲೆಂಡ್‌ ಕೂಟದ 5 ಪಂದ್ಯಗಳನ್ನೂ ಈ ನೋವಿನಿಂದ ಹೇಗೋ ಮುಗಿಸಿದೆ. ಆದರೆ ಸ್ವಿಸ್‌ ಓಪನ್‌ ಕೂಟದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಜಠರದ ಊರಿಯೂತದ ಸಮಸ್ಯೆ ತೀವ್ರವಾಗಿದ್ದು, ವೈದ್ಯರು ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಭಾರತಕ್ಕೆ ಮರಳಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇನೆ’ ಎಂದು ಸೈನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next