Advertisement

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

11:53 PM Mar 18, 2024 | Team Udayavani |

ಬಾಸೆಲ್‌ (ಸ್ವಿಜರ್ಲೆಂಡ್‌): ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತದ ಶಟ್ಲರ್‌ಗಳಿಗೆ ಮತ್ತೂಂದು ಸವಾಲು ಎದುರಾಗಿದೆ. ಮಂಗಳವಾರ “ಸ್ವಿಸ್‌ ಓಪನ್‌ ಸೂಪರ್‌ 300′ ಬ್ಯಾಡ್ಮಿಂಟನ್‌ ಟೂರ್ನಿ ಆರಂಭವಾಗಲಿದ್ದು, ನಮ್ಮವರ ಆಟ ಹೇಗಿದ್ದೀತು ಎಂಬ ಪ್ರಶ್ನೆ ಎದುರಾಗಿದೆ.

Advertisement

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮೊನ್ನೆಯಷ್ಟೇ ಅವರು ಆಲ್‌ ಇಂಗ್ಲೆಂಡ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತನಕ ಸಾಗಿದ್ದರು. 7ನೇ ಶ್ರೇಯಾಂಕದ ಲಕ್ಷ್ಯ ಸೇನ್‌ ಮಲೇಷ್ಯಾದ ಲಿಯಾಂಗ್‌ ಜುನ್‌ ಹಾವೊ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇಲ್ಲಿಂದ ಮುಂದೆ ಸಾಗಿದರೆ 2021ರ ಚಾಂಪಿಯನ್‌ ಲೀ ಜೀ ಜಿಯಾ ಎದುರಾಗುವ ಸಾಧ್ಯತೆ ಇದೆ.

ಮಾಜಿ ನಂ.1 ಆಟಗಾರ ಕೆ. ಶ್ರೀಕಾಂತ್‌ ಏಷ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತ, ಚೈನೀಸ್‌ ತೈಪೆಯ ವಾಂಗ್‌ ಝು ವೀ ವಿರುದ್ಧ, ಭರವಸೆಯ ಯುವ ಆಟಗಾರ ಪ್ರಿಯಾಂಶು ರಾಜಾವತ್‌ ಹಾಂಕಾಂಗ್‌ನ 4ನೇ ಶ್ರೇಯಾಂಕದ ಲೀ ಚುಕ್‌ ಯಿ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು.

ಪಿ.ವಿ. ಸಿಂಧು ಅವರಿಗಿಲ್ಲಿ ಮತ್ತೆ ಜರ್ಮನಿಯ ವೋನ್‌ ಲೀ ಎದುರಾಗಿದ್ದಾರೆ. ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲೂ ಇವರಿಬ್ಬರು ಮುಖಾಮುಖೀ ಆಗಿದ್ದರು. ಅಲ್ಲಿ ವೋನ್‌ ಲೀ ಗಾಯಾಳಾಗಿ ಹಿಂದೆ ಸರಿದಿದ್ದರು. ಆಕರ್ಷಿ ಕಶ್ಯಪ್‌ ಕೆನಡಾದ ಮೈಕೆಲ್‌ ಲೀ ವಿರುದ್ಧ ಆಡಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ತನಿಷಾ ಕ್ರಾಸ್ಟೊ, ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಕಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next