Advertisement

Miami Open ಟೆನಿಸ್‌: ಸುಮಿತ್‌ ಗೆಲುವಿನ ಆರಂಭ

11:52 PM Mar 19, 2024 | Team Udayavani |

ಮಿಯಾಮಿ (ಫ್ಲೋರಿಡಾ): ಇದೇ ಮೊದಲ ಬಾರಿಗೆ “ಮಿಯಾಮಿ ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ಆಡಲಿಳಿದಿರುವ ಭಾರತದ ಸುಮಿತ್‌ ನಾಗಲ್‌ ಗೆಲುವಿನ ಆರಂಭ ಪಡೆದಿದ್ದಾರೆ.

Advertisement

ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಕೆನಡಾದ ಗ್ಯಾಬ್ರಿಯಲ್‌ ಡಯಲ್ಲೊ ವಿರುದ್ಧ 7-6 (3), 6-2 ಅಂತರದ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಕೋಲ್ಮನ್‌ ವೋಂಗ್‌ ವಿರುದ್ಧ ಸೆಣಸಲಿದ್ದಾರೆ.

ಕಳೆದ ತಿಂಗಳು ಚೆನ್ನೈ ಓಪನ್‌ ಚಾಂಪಿಯನ್‌ ಆದ ಬಳಿಕ ಸುಮಿತ್‌ ನಾಗಲ್‌ ವಿಶ್ವದ ಟಾಪ್‌-100 ರ್‍ಯಾಂಕಿಂಗ್‌ ಯಾದಿಯನ್ನು ಪ್ರವೇಶಿಸಿದ್ದರು. ಈ ಗೆಲುವಿನ ಬಳಿಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 92ನೇ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ.

ಸುಮಿತ್‌ ನಾಗಲ್‌ ಕಳೆದ ಇಂಡಿಯನ್‌ ವೆಲ್ಸ್‌ ಪಂದ್ಯಾವಳಿಯ ಮುಖ್ಯ ಸುತ್ತಿನಲ್ಲೂ ಆಡುವ ಅವಕಾಶ ಪಡೆದಿದ್ದರು. ಕೊನೆ ಗಳಿಗೆಯಲ್ಲಿ ರಫೆಲ್‌ ನಡಾಲ್‌ ಹಿಂದೆ ಸರಿದ ಕಾರಣ ಸುಮಿತ್‌ಗೆ ಬಾಗಿಲು ತೆರೆದಿತ್ತು. ಇಲ್ಲಿ ಅವರು ಮಿಲೋಸ್‌ ರಾನಿಕ್‌ ವಿರುದ್ಧ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು.ಇದಕ್ಕೂ ಮೊದಲು ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ದ್ವಿತೀಯ ಸುತ್ತು ತಲುಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next