Advertisement
ಗ್ರಾಮಾಂತರ ಪ್ರದೇಶಗಳಲ್ಲಿ ಹೊರಗಿನವರನ್ನು ಕ್ವಾರಂಟೈನ್‌ನಲ್ಲಿ ಇರಿಸುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರು, ಕೃಷಿಕರು ಇದ್ದಾರೆ. ಇದೇ ರಸ್ತೆಯಲ್ಲಿ ತಮ್ಮ ಜಮೀನುಗಳಿಗೆ ಹೋಗಿ ಬರುತ್ತಾರೆ. ವಸತಿ ಶಾಲೆಯ ಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಪ್ರತಿದಿನ ನೂರಾರು ರೋಗಿಗಳು ಬಂದು ಹೋಗುತ್ತಾರೆ. ಇಲ್ಲಿ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರ ಸಹ ಇದ್ದು, ಹೆಚ್ಚಿನ ಜನದಟ್ಟಣೆ ಈ ಭಾಗದಲ್ಲಿ ಇರುತ್ತದೆ. ಇಂತಹ ಪ್ರದೇಶದಲ್ಲಿ ಕ್ವಾರಂಟೈನ್ಗೆ ಜನರನ್ನು ತಂದು ಇರಿಸುವುದರಿಂದ ಸೋಂಕು ಹರಡುವ ಭೀತಿಯಿದೆ ಎಂದು ಪ್ರತಿಭಟನಕಾರರು ಭೀತಿ ವ್ಯಕ್ತಪಡಿಸಿದರು.