Advertisement

ಸಾಗರಕ್ಕೆ ಕಾಲಿಟ್ಟ ಚಿಕ್ಕ ಮೇಳ

06:47 PM Nov 12, 2021 | Adarsha |

ಸಾಗರ: ಈ ಹಿಂದಿನಿಂದಲೂ ದಕ್ಷಿಣಕನ್ನಡದ ವಿವಿಧ ಭಾಗಗಳಲ್ಲಿ ಹಾಗೂಹೊಸನಗರದವರೆಗೂ ಚಾಲ್ತಿಯಲ್ಲಿದ್ದ,ಯಕ್ಷಗಾನದ ಪುಟ್ಟ ಝಲಕ್‌ರೂಪದ ಚಿಕ್ಕಮೇಳ ಇದೀಗ ಸಾಗರತಾಲೂಕಿನಲ್ಲಿ ಹಲವೆಡೆ ಯಶಸ್ವಿಯಾಗಿಪ್ರದರ್ಶನಗೊಳ್ಳಲಾರಂಭವಾಗಿದೆ.

Advertisement

ಉಡುಪಿ ಕಟವಾಡಿಯ ಶ್ರೀ ವೀರಸ್ತಂಭದುರ್ಗಾಪರಮೇಶ್ವರಿ ದೇವಸ್ಥಾನದತಂಡ ಹಾಗೂ ಸಾಗರದ ಯಕ್ಷತರಂಗ ಸಂಘಟನೆಯ ಆಶ್ರಯದಲ್ಲಿ ಸಾಗರದ ಹೆಗ್ಗೊàಡು ಸಮೀಪದ ಕೇಡಲಸರಸೇರಿದಂತೆ ನಗರ ಹಾಗೂ ಇತರ ಕೆಲವುಗ್ರಾಮದ ಮನೆಗಳಲ್ಲಿ ನಡೆಯಿತು.

ಕರಾವಳಿಯ ಗಂಡುಕಲೆಯಾದ ಯಕ್ಷಗಾನದ ಪ್ರಸಿದ್ಧ ಪ್ರಸಂಗಗಳ ತುಣುಕುಗಳನ್ನು ವಾಸದ ಮನೆಯೊಳಗಿನಸ್ಥಳಾವಕಾಶದಲ್ಲಿಯೇ 20 ನಿಮಿಷ ಅಥವಾ ಅರ್ಧ ಘಂಟೆಗಳ ಅವ ಯಲ್ಲಿ ಪ್ರದರ್ಶಿಸುವ ವಿಶಿಷ್ಟ ಪ್ರಯೋಗವಿದು. ಸಾಮಾನ್ಯವಾಗಿ ಯಕ್ಷಗಾನ ಭಾಗವತರು,ಮದ್ದಲೆಗಾರರು ಹಾಗೂ ಕೇವಲಎರಡು ಪಾತ್ರಗಳು ವೇಷಭೂಷಣಸಹಿತ ಸಿದ್ಧಗೊಂಡೇ ಮನೆಗೆ ಬಂದುಪ್ರದರ್ಶನ ನೀಡಲಾಗುತ್ತದೆ. ಸಂಜೆ ಆರುಘಂಟೆಯಿಂದ 10-30ರ ಒಳಗೆ ಮನೆಗೆ ಆಗಮಿಸುವ ಈ ತಂಡ ಪ್ರದರ್ಶನ ನೀಡುತ್ತದೆ.

ಈ ಅವ ಯಲ್ಲಿ ಪೂರ್ವನಿಗದಿಯಾದ ಹಲವು ಮನೆಗಳಿಗೆ ಈಕಲಾವಿದರು ವೇಷ ಧರಿಸಿ “ರೆಡಿಮೇಡ್‌’ಆಗಿಯೇ ಆಗಮಿಸಿ ಥಕಥೆ„ ಎಂದುಯಕ್ಷಗಾನದ ಸ್ವಾದ ಉಣಿಸುತ್ತಾರೆ.ಗ್ರಾಮೀಣ ಭಾಗದಲ್ಲಿ ಒಂದುಮನೆಯಿಂದ ಮತ್ತೂಂದು ಮನೆಗೆಹೋಗಿ ಪ್ರದರ್ಶನ ನೀಡಲಾಗುತ್ತದೆ.ಬೇಡಿಕೆ ಇದ್ದಾಗ ರಾತ್ರಿ 12, ಒಂದುಗಂಟೆಯವರೆಗೆ ಪ್ರದರ್ಶನ ನಡೆದದ್ದೂ ಇದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕೆ.ಕೆ.ರಾಜೇಶ್‌, ತುಂಬಾ ಹಿಂದೆ ನಮ್ಮಲ್ಲೂ ಚಿಕ್ಕ ಮೇಳ ಪ್ರದರ್ಶನನಡೆಯುತ್ತಿತ್ತು. ದೀಪಾವಳಿಯಹಬ್ಟಾಡುವ ಸಂಪ್ರದಾಯದಂತೆ ಇದೂನಡೆಯುತ್ತಿತ್ತು. ಆದರೆ ಕಾಲಾಂತರದಲ್ಲಿಇದು ಚಾಲ್ತಿಯಲ್ಲಿರಲಿಲ್ಲ. ಕೊರೊನಾ ಕಾಲದಲ್ಲಿ ನಮ್ಮ ಸಾಂಸ್ಕೃತಿಕ ಜಗತ್ತುತೀವ್ರ ಸಮಸ್ಯೆಗೊಳಗಾಯಿತು.

Advertisement

ಕಲಾವಿದರು ತಮ್ಮ ಬದುಕಿನನಿರ್ವಹಣೆಯಲ್ಲಿ ಸಂಕಷ್ಟಗೊಳಗಾದರು.ಅಂತಹ ಸಂದರ್ಭದಲ್ಲಿ ಈ ರೀತಿಯಚಿಕ್ಕಮೇಳಗಳ ಆಯೋಜನೆಯ ಮೂಲಕಕಲಾವಿದರಿಗೆ ಸಹಾಯ ಒದಗಿಸುವುದುಉತ್ತಮ ಮಾರ್ಗ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next