Advertisement
ಆ ದಿನಕ್ಕೆ ದೊಡ್ಡ ಹಬ್ಬ. ಆಗಸ್ಟ್ ಬಂತೆಂದರೆ ಸಾಕು ನಮ್ಮ ತಯಾರಿ ಜೋರು, ಸ್ವಾತಂತ್ರ್ಯ ದಿನಾಚರಣೆ ದಿನ ಮೈದಾನದಲ್ಲಿ ಗುಂಪು ನೃತ್ಯಮಾಡಲು ಪ್ರತಿ ತರಗತಿಗೆ ಹೋಗಿ ವಿದ್ಯಾರ್ಥಿಗಳನ್ನು ಸೇರಿಸಿ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಲು ತರಬೇತಿ ಪ್ರಾರಂಭ.
Related Articles
Advertisement
ಇನ್ನು ಶಾಲೆಯನ್ನು ಸ್ವಚ#ಗೊಳಿಸಿ ರಂಗೋಲಿಹಾಕಿ ಧ್ವಜ ಸ್ಥಂಭ ಸಿದ್ಧಮಾಡಲು ಎಲ್ಲರೂ ತಾ ಮುಂದೆ ನಾವು ಮುಂದೆ ಎನ್ನುತ್ತಿದ್ದರು. ಶಾಲೆ ಪೂರ್ತಿ ಧ್ವಜದಿಂದ, ಪರ್ಪರೆ ಇಂದ ಅಲಂಕಾರ ಮಾಡಲು ವಿಪರೀತ ಖುಷಿ. ಹೂವುಪಕಳೆ ಹಾಕಿ ಧ್ವಜ ಕಟ್ಟುವುದೇ ಎಲ್ಲಿಲ್ಲದ ಆನಂದ.ಪ್ರತಿ ದಿನ ಬೆಳಗ್ಗೆ ಕಷ್ಟ ಪಟ್ಟು ಏಳುವ ನಾವು. ಸ್ವಾತಂತ್ರ್ಯ ದಿನಾಚರಣೆಯಂದು ಯಾರೂ ಎಬ್ಬಿಸದೇ ಬೇಗ ಎದ್ದು ಬಿಳಿ ಯುನಿಫಾರ್ಮ್ ಧರಿಸಿ. ಕೆಸರಿ, ಬಿಳಿ, ಹಸಿರು ರಿಬ್ಬನ್ ಕಟ್ಟಿಕೊಂಡು, ಧ್ವಜ ಹಿಡಿದು ಕೊಂಡು ಶಾಲೆಗೆ ಓಡುತ್ತಿದ್ದೇವು. ಧ್ವಜಾರೋಹಣ ಆದೊಡನೆ ಬ್ಯಾಂಡಿನೊಂದಿಗೆ ರಾಷ್ಟ್ರಗೀತೆ ಹಾಡುವಾಗ ಎಲ್ಲರ ಧ್ವನಿಯೂ ತಾರಕಕ್ಕೇರುತ್ತಿತ್ತು. ಧ್ವಜ ಬಾನಂಗಳದಲ್ಲಿ ಹಾರಾಡುವುದನ್ನು ನೋಡುತ್ತಾ ಹಾಡುವ ಅನುಭವ ಅತೀತ. ಅನಂತರ ಸಿಹಿಹಂಚುವ ಕಾರ್ಯಕ್ರಮದಲ್ಲಂತೂ ಜಗಳವೇ ನಡೆಯುತ್ತಿತ್ತು. ನನಗೆ ಸಿಹಿತಿನಿಸು ಒಂದು ಬಂತು, ಅವಳಿಗೆ ಎರಡು ದೊರೆಯಿತು., ಅವನು ಎಲ್ಲವನ್ನೂ ತಿಂದ ಇಂತ ಚಾಡಿಗಳು ಆಗ ಯುದ್ಧವಾಗಿ ಕಂಡು ಈಗ ನಗುಮೂಡಿಸುತ್ತದೆ. ಎಲ್ಲರೂ ಸಿಹಿ ತಿಂದ ಅನಂತರ ಮೈದಾನದತ್ತ ಎಲ್ಲರ ನಡುಗೆ ಅಲ್ಲಿ ಈಡಿ ಊರಿನ ಎಲ್ಲ ಶಾಲೆ, ಕಾಲೇಜು ಮಕ್ಕಳು ಬಂದು ಸೇರಿರುತ್ತಾರೆ. ಅಲ್ಲಿ ಧ್ವಜಾರೋಹಣ ಆಗುವುದರೊಳಗೆ ಎಲ್ಲರೂ ಅಲ್ಲಿ ಸೇರಲು ಓಡೊಡಿ ರಭಸದಿಂದ ಹೋಗುತ್ತಿದ್ದೇವು. ಅಲ್ಲಿ ಎಲ್ಲ ವಿಧ್ಯಾರ್ಥಿಗಳ ಪರೇಡ್ ಮತ್ತು ನೃತ್ಯ. ಎಲ್ಲ ಶಾಲಾ ಕಾಲೇಜು ಮಕ್ಕಳೆದುರು ದೊಡ್ಡ ಮೈದಾನದ ಮಧ್ಯ ನೃತ್ಯ, ಪರೇಡ್ ಮಾಡುವುದೇ ದೊಡ್ಡ ಹೆಮ್ಮೆ. ಒಂದು ವಾರದಿಂದ ಕುತೂಹಲ ಭರಿತರಾಗಿ ತರಬೇತಿ ಪಡೆದ ನೃತ್ಯವನ್ನು ಮಾಡುವಾಗ ಸುತ್ತುವರೆದ ಜನರ ಚಪ್ಪಾಳೆಯ ಶಬ್ದ ಅತ್ಯಮೂಲ್ಯ. ಅನಂತರ ಪರೇಡ್ ಮಾಡುವ ಸ್ಪರ್ಧೆಯಲ್ಲಿ ನಮ್ಮ ಶಾಲೆಯೇ ಮೊದಲ ಪ್ರಶಸ್ತಿ ಪಡೆಯಲೆಂದು ಕುತೂಹಲ ಭರಿತರಾಗಿ ನೋಡುವ ದೃಶ್ಯ ಅಗಣಿತ. ಅಂತಹ ವರ್ಣನಾತೀತ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಬಾಲ್ಯದ ಅನುಭವ ಚಿರಸ್ಮರಣೀಯ.