Advertisement

ಅಯೋಧ್ಯೆ ಶ್ರೀರಾಮನ ಫ್ಯಾಕ್ಟರಿಯಿಂದ ಕೇಸರಿ ಶಾಲು ಬಂದಿತ್ತು: ಸಚಿವ ಈಶ್ವರಪ್ಪ

04:28 PM Feb 10, 2022 | Team Udayavani |

ಚಿತ್ರದುರ್ಗ: ಕೇಸರಿ ಶಾಲುಗಳನ್ನು ನಾವು ಅಯೋಧ್ಯೆಯ ಶ್ರೀರಾಮನ ಫ್ಯಾಕ್ಟರಿಗೆ ಆರ್ಡರ್ ಕೊಟ್ಟಿದ್ದೆವು, ಅಲ್ಲಿಂದ ಹನುಮಾನ್ ಟ್ರಾನ್ಸ್ ಪೋರ್ಟ್ ಮುಖಾಂತರ ಕರ್ನಾಟಕ ರಾಜ್ಯಕ್ಕೆ ತರಿಸಿದ್ದೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವರ ಪುತ್ರ ಸೂರತ್ ನಿಂದ ಕೇಸರಿ ಶಾಲು ತರಿಸಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ಅಯೋಧ್ಯೆಯಿಂದ ಬಂದ ಕೇಸರಿ ಶಾಲುಗಳು ರಾಜ್ಯದ ಕೋಟಿ ಕೋಟಿ ಯುವಕರ ಹೃದಯ ತಲುಪಿದೆ. ಧರ್ಮ ದೇಶವನ್ನು ರಕ್ಷಣೆ ಮಾಡಲು, ದೇಶ ಭಕ್ತಿಯನ್ನು ಜಾಗೃತಿ ಮಾಡಲು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿದೆ. ಇದು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದರು.

ಡಿ.ಕೆ. ಶಿವಕುಮಾರ್ ಅವರಿಗೆ ಇದೆಲ್ಲಾ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಕನಕಪುರದ ಬಂಡೆ ಫ್ಯಾಕ್ಟರಿ. ಆ ಬಂಡೆಯನ್ನು ಬೇರೆ ಬೇರೆ ರಾಜ್ಯಕ್ಕೆ ಕಳಿಸುವುದು ಮಾತ್ರ ಡಿಕೆ ಬ್ರದರ್ಸ್ ಅವರಿಗೆ ಗೊತ್ತು ಎಂದು ಕಿಡಿ ಕಾರಿದರು.

ಹಿಜಾಬ್ ವಿವಾದ ವ್ಯವಸ್ಥಿತ ಸಂಚು: ಕುಂದಾಪುರದ ಕಾಲೇಜಿನಲ್ಲಿ 96 ಮುಸ್ಲೀಂ ಸಮುದಾಯದ ಮಕ್ಕಳಿದ್ದಾರೆ. ಅದರಲ್ಲಿ 6 ಮಕ್ಕಳು ಮಾತ್ರ ಮೊಂಡಾಟ ಮಾಡುತ್ತಿದ್ದರು. ಈ ಮಕ್ಕಳಿಗೆ ಸಮವಸ್ತ್ರದ ಬಗ್ಗೆಯೂ ಎಲ್ಲರೂ ತಿಳಿ ಹೇಳಬೇಕಿತ್ತು ಎಂದು ಈಶ್ವರಪ್ಪ ಹೇಳಿದರು.

Advertisement

ಇದನ್ನೂ ಓದಿ:ಆರ್ ಎಸ್ಎಸ್ ಅಂಗಳದಲ್ಲಿ ಬೆಳೆದ ಸಾವಂತ್ ಮತ್ತೆ ಸಿಎಂ ಆಗ್ತಾರಾ?

ಕಾಂಗ್ರೆಸ್ ನಾಯಕರು ಹಾಗೂ ಮುಸ್ಲಿಂ ನಾಯಕರು ಅವರನ್ನು ಸಮಾಧಾನ ಮಾಡಬೇಕಿತ್ತು. ಆ ಕೆಲಸ ಮಾಡಿದ್ದರೆ ದೇಶದಲ್ಲಿ ಈ ಸ್ಥಿತಿ ಬರುತ್ತಿರಲಿಲ್ಲ. ಇದೆಲ್ಲವೂ ವ್ಯವಸ್ಥಿತ ಸಂಚು. ಇದರ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಎಂದರು.

ಎಲ್ಲಾ ಮಕ್ಕಳು ಸಮವಸ್ತ್ರ ಧರಿಸಿ ಎಂದು ಈಗಲೂ ನಾನು ಹೇಳುತ್ತೇನೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ಓಟಿನ ಮೇಲೆ ಕಣ್ಣಿಟ್ಟು ಮಾಡುತ್ತಿರುವ ಕುತಂತ್ರ ಇದಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ಇತ್ತಾ: ರಾಷ್ಟ್ರ ಧ್ವಜದ ಮೇಲೆ ಗೌರವ ಇಲ್ಲದವರು ರಾಜಕೀಯದಲ್ಲಿ ಇರಬಾರದು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಸಚಿವ ಕೆ. ಎಸ್. ಈಶ್ವರಪ್ಪ, ಅವರು ಸರಿಯಾಗಿ ಹೇಳಿದ್ದಾರೆ, ಸಿದ್ದರಾಮಯ್ಯ‌ ಅವರಿಗೆ ಕೇಸರಿ ಪೇಟ ಹಾಕಲು ಹೋದಾಗ ತೆಗೆದು ಬಿಸಾಕಿದ್ದಾರೆ. ಆಗ ಅವರ ತಲೆಯಲ್ಲಿ ಸಗಣಿ ಇತ್ತೇನೋ ಗೊತ್ತಿಲ್ಲ, ಕೇಸರಿ ಎಂದರೆ ತ್ಯಾಗ, ಬಲಿದಾನದ ಸಂಕೇತ. ಆದರೆ ಸಿದ್ದರಾಮಯ್ಯನವರಿಗೆ ಕೇಸರಿ ಎಂದರೆ ಹಿಂದೂ, ಹಿಂದೂ, ಹಿಂದೂ ಅನ್ನುವುದು ಬಿಟ್ಟರೆ ಬೇರೆನಿಲ್ಲ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next