Advertisement

“ಸಂಚಾರ ನಿಯಮ ಪಾಲನೆಯಿಂದ ಸುರಕ್ಷಿತ ಪ್ರಯಾಣ’

07:10 AM Aug 18, 2017 | |

ಶಿರ್ವ: ಸಂಚಾರ ನಿಯಮಗಳನ್ನು, ರಸ್ತೆ ಚಿಹ್ನೆಗಳನ್ನು ಪಾಲನೆ ಮಾಡುವುದರಿಂದ ಸುರಕ್ಷಿತ ಪ್ರಯಾಣ ಸಾಧ್ಯವಾಗುತ್ತದೆ ಎಂದು ಶಿರ್ವ ಪಿಎಸ್‌ಐ ನರಸಿಂಹ ಶೆಟ್ಟಿ ಹೇಳಿದರು.

Advertisement

ಅವರು ಗುರುವಾರದಂದು ಮೂಡುಬೆಳ್ಳೆ ಪೇಟೆಯಲ್ಲಿ ‘ಉದಯವಾಣಿ’ ಪ್ರಾಯೋಜಿತ ಸಂಚಾರ ಚಿಹ್ನೆಗಳ ಮಾರ್ಗದರ್ಶಿಯನ್ನು ರಿಕ್ಷಾ, ಟೆಂಪೋ ಚಾಲಕರಿಗೆ, ಸಾರ್ವಜನಿಕರಿಗೆ ತರಿಸಿ ಮಾಹಿತಿ ನೀಡಿದರು.

ಸಂಗ್ರಾಹಯೋಗ್ಯ ಕೊಡುಗೆ
“ಉದಯವಾಣಿ’ ಪ್ರಾಯೋಜಿಸಿದ ಸಂಚಾರ ಚಿಹ್ನೆಗಳ ಮಾರ್ಗದರ್ಶಿ ಸಂಗ್ರಹ ಯೋಗ್ಯ ಕೊಡುಗೆಯಾಗಿದ್ದು, ಇದರಲ್ಲಿ ರಸ್ತೆ ಚಿಹ್ನೆಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲಾಗಿದೆ. ಇದರಿಂದ ಚಾಲಕರಿಗೆ ಮಾರ್ಗದರ್ಶನ ದೊರೆಯುವುದು ಮಾತ್ರವಲ್ಲದೆ, ಡ್ರೆçವಿಂಗ್‌ ಲೈಸೆನ್ಸ್‌ ಪಡೆದುಕೊಳ್ಳುವವರ ಅಧ್ಯಯನಕ್ಕೂ ಸಹಕಾರಿಯಾಗಿದೆ. ಉತ್ತಮ ಗುಣಮಟ್ಟದ ಕಾಗದ ಹಾಗೂ ಮುದ್ರಣದಿಂದ ಮಾರ್ಗದರ್ಶಿಯು ಆಕರ್ಷಣೀಯವಾಗಿದ್ದು, ದೀರ್ಘ‌ ಬಾಳಿಕೆ ಬರುವಂಥದ್ದಾಗಿದೆ ಎಂದು ಅವರು ಹೇಳಿದರು. ಎಎಸ್‌ಐ ಶಿವಾನಂದ, ಎಚ್‌ಸಿ ದಯಾನಂದ, ಗ್ರಾಪಂ ಸದಸ್ಯ ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. 

ಪಿಎಸ್‌ಐ ಕಾಳಜಿಗೆ ಶ್ಲಾಘನೆ
ಹೆಸರಿಗಷ್ಟೇ ಮಾಹಿತಿ ಮಾರ್ಗದರ್ಶಿಯನ್ನು ವಿತರಣೆ ಮಾಡದೆ, ರಿಕ್ಷಾ, ಟೆಂಪೋ ಚಾಲಕರೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದ ಶಿರ್ವ ಪಿಎಸ್‌ಐ ನರಸಿಂಹ ಶೆಟ್ಟಿ ಅವರ ಕಾಳಜಿಗೆ ಶ್ಲಾಘನೆ ವ್ಯಕ್ತವಾಗಿದೆ. ಇತ್ತೀಚೆಗೆ ಶಿರ್ವ ಠಾಣೆಯ ವಿವಿಧೆಡೆ ಜರಗಿದ ಸುಧಾರಿತ ಪೊಲೀಸ್‌ ಬೀಟ್‌ ವ್ಯವಸ್ಥೆ ಸಭೆಗಳಲ್ಲೂ ಅವರು ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಮೂಡುವಂತೆ ಮಾಡಿದ್ದರು. ಮೂಡುಬೆಳ್ಳೆ ಟ್ರಾಫಿಕ್‌ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವೈಯಕ್ತಿಕವಾಗಿ ಗಮನ ಹರಿಸುತ್ತಿರುವ ಅವರು, ಆದ್ಯತೆಯಲ್ಲಿ ದಿನಕ್ಕೋರ್ವ ಪೊಲೀಸ್‌ ಸಿಬಂದಿಯನ್ನು ನಿಯೋಜಿಸುವ ಮೂಲಕ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next