Advertisement

ಕಾವೇರಿ ತೀರದಲ್ಲಿ ಸದ್ಗುರು ಅಭಿಯಾನ

11:20 PM Sep 14, 2019 | Lakshmi GovindaRaju |

ತಿರುವರೂರು: ಕಾವೇರಿ ನದಿ ಉಳಿಸಲು “ಕಾವೇರಿ ಕೂಗು’ ಎಂಬ ಅಭಿಯಾನ ನಡೆಸುತ್ತಿರುವ ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು, ಶನಿವಾರ ತಮಿಳುನಾಡಿನ ತಿರುವರೂರಿನಲ್ಲಿ ರೈತರ ಜತೆ ಸಂವಾದ ನಡೆಸಿದರು. ನದಿ ದಡದ 20 ಲಕ್ಷ ರೈತರು ಮತ್ತು 30 ಲಕ್ಷ ಭೂರಹಿತ ರೈತರು ಈ ಸಂವಾದಕ್ಕೆ ಹಾಜರಾಗಿದ್ದರು.

Advertisement

12 ಸಾವಿರ ವರ್ಷಗಳಿಂದ ಈ ಭೂಮಿಯಲ್ಲಿ ಕೃಷಿ ನಡೆಯುತ್ತಿದೆ. ಈ ಭೂಮಿ ಎಷ್ಟು ಫ‌ಲವತ್ತಾಗಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಇಂತಹ ಫ‌ಲವತ್ತಾದ ಮಣ್ಣನ್ನು ನಾವು ಬರಡಾಗಿಸುತ್ತಿದ್ದೇವೆ. ಈ ಭಾಗದಲ್ಲಿ ಮೊದಲು ಮರಗಳೇ ತುಂಬಿದ್ದವು. ಈಗ ಜನಸಂಖ್ಯೆ ಹೆಚ್ಚಾಗಿದೆ. ನಮಗೆ ಬೆಳೆ ಬೆಳೆಯಬೇಕಿದೆ. ಆದರೆ, ಮರಗಳಿಲ್ಲದೇ ಬೆಳೆ ಬೆಳೆಯಲು ಸಾಧ್ಯವಿಲ್ಲ.

ಬೆಳೆ ಉತ್ತಮವಾಗಿ ಬೆಳೆಯಲು ಕನಿಷ್ಠ ಆರು ತಾಸುಗಳವರೆಗೆ ಭೂಮಿಯು ಮರದ ನೆರಳಿನಲ್ಲಿರಬೇಕು. ಮರಗಳ ಜೊತೆಗೇ ನಮ್ಮ ಬೆಳೆಯನ್ನೂ ನಾವು ಬೆಳೆಯಬಹುದು ಎಂದು ಸಲಹೆ ನೀಡಿದರು. ಮಹಾತ್ಮ ಗಾಂಧಿಯವರ 150ನೇ ಜಯಂತಿ ಹಿನ್ನೆಲೆಯಲ್ಲಿ ಈಶ ಫೌಂಡೇಶನ್‌ನ ಎಲ್ಲ ನರ್ಸರಿಗಳನ್ನೂ ಮಹಾತ್ಮ ಗ್ರೀನ್‌ ಇಂಡಿಯಾ ಮಿಷನ್‌ ಎಂದು ಮರು ನಾಮಕರಣ ಮಾಡಲಾಗುತ್ತದೆ.

ಸದ್ಯ 35 ನರ್ಸರಿಗಳನ್ನು ನಾವು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ 350 ನರ್ಸರಿಗಳನ್ನು ಆರಂಭಿಸಲಾಗುತ್ತದೆ ಎಂದರು. “ಕಾವೇರಿ ಕೂಗು’ ಅಭಿಯಾನವು ಅಂತಿಮ ಹಂತದಲ್ಲಿದ್ದು, ಕರ್ನಾಟಕದ ತಲಕಾವೇರಿಯಿಂದ ಇದು ಸೆ. 3ರಂದು ಆರಂಭವಾಗಿದೆ. ಕಾವೇರಿ ನದಿಯಾದ್ಯಂತ ನಡೆದ ಈ ಅಭಿಯಾನ ಸೆ. 17ರಂದು ಮುಕ್ತಾಯವಾಗಲಿದೆ. ಚೆನ್ನೈನಲ್ಲಿ ಸೆ.15 ರಂದು ಬೃಹತ್‌ ರ್ಯಾಲಿ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next