Advertisement

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

07:05 PM Jan 10, 2025 | Team Udayavani |

ಬೀದರ್:‌ ಗುತ್ತಿಗೆದಾರ್ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಸೇರಿದಂತೆ ಐವರು ಶುಕ್ರವಾರ (ಜ.10) ನಗರದಲ್ಲಿ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಒಳಗಾದರು.

Advertisement

ಟೆಂಡರ್ ವಂಚನೆ ಮತ್ತು ಕೊಲೆ ಬೆದರಿಕೆ ಹಿನ್ನಲೆ ನೊಂದು ಸಚಿನ್ ಡಿ. 26 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಸೇರಿ ಎಂಟು ಜನರ ಹೆಸರು ಉಲ್ಲೇಖಿಸಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಖುದ್ದು ವಿಚಾರಣೆಗೆ ಹಾಜರಾಗುವಂತೆ ಕಪನೂರ್ ಮತ್ತು ಗ್ಯಾಂಗ್ ಗೆ ನೋಟಿಸ್ ಜಾರಿ ಮಾಡಿತ್ತು.

ಈ ಹಿನ್ನೆಲೆ ಶುಕ್ರವಾರ ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಮತ್ತು ಡಿವೈಎಸ್ಪಿ ಸುಲೇಮಾನ್‌ ತಹಶೀಲ್ದಾರ್ ಅವರ ಎದುರು ರಾಜು ಕಪನೂರ, ನಂದಕುಮಾರ ನಾಗಭುಜಂಗಿ, ಗೋರಖನಾಥ, ರಾಮನಗೌಡ ಪಾಟೀಲ ಮತ್ತು ಸತೀಶ ವಿಚಾರಣೆಗೆ ಹಾಜರಾಗಿದ್ದಾರೆ.

ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಈಗಾಗಲೇ ಎರಡು ಬಾರಿ ಸಚಿನ್‌ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದು, ಈಗ ಸಚಿನ್ ಡೆತ್ ನೋಟ್ ನಲ್ಲಿ‌ ಪ್ರಸ್ತಾಪವಾಗಿರುವವರನ್ನು ವಿಚಾರಣೆಗೆ ಒಳಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next