Advertisement

ಶಬರಿಮಲೆ‌: ಮುಂದುವರಿದ ಪ್ರತಿಭಟನೆ

06:08 AM Oct 07, 2018 | Team Udayavani |

ತಿರುವನಂತಪುರ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಕೇರಳದ ಆಡಳಿತಾ ರೂಢ ಎಲ್‌ಡಿಎಫ್ ಸರಕಾರದ ವಿರುದ್ಧ ನಡೆ ಯುತ್ತಿರುವ ಪ್ರತಿಭಟನೆಗಳು ಶನಿವಾರವೂ ಮುಂದುವರಿದವು. ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ ತೀರ್ಪಿನ  ಬಗ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸದೆ ಆದೇಶವನ್ನು ಯಥಾವತ್ತಾಗಿ ಜಾರಿ ಗೊಳಿಸಲು ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

Advertisement

ಕೊಟ್ಟಾಯಂ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿ ಸಿದ್ದರು. ಪಟ್ಟಣಂತಿಟ್ಟ ಜಿಲ್ಲೆಯ ಅರಾನುಮ್ಲ ಪ್ರಾಂತ್ಯದಲ್ಲಿರುವ ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು.  

ಕೊಟ್ಟಾಯಂ ರ್ಯಾಲಿಯಲ್ಲಿ ಮಾತಾಡಿದ ದೇಗುಲದ ಪ್ರಧಾನ ಅರ್ಚಕ ಕಂಡರಾರು ರಾಜೀವರು  ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವ ಅಯ್ಯಪ್ಪ ದೇಗುಲದ ಸಂಪ್ರದಾಯ ಕಾಪಾಡಲು ಎಲ್ಲರೂ ಕಟಿಬದ್ಧರಾಗಿ ನಿಲ್ಲಬೇಕೆಂದು ಕರೆ ನೀಡಿದರು.

ಅಯ್ಯಪ್ಪ ಬಗ್ಗೆ ಆಕ್ಷೇಪಾರ್ಹ ವಿಡಿಯೋ
ಚೆನ್ನೈ: ಸಾಮಾಜಿಕ ಮಾಧ್ಯಮದಲ್ಲಿ ಅಯ್ಯಪ್ಪ ದೇವರ ಬಗ್ಗೆ ಆಕ್ಷೇಪಾರ್ಹ ವೀಡಿಯೋ ಪ್ರಕಟಿಸಿದ ತಮಿಳುನಾಡಿನ ತಿರುನಿನವೂರಿನ ಸೆಲ್ವನ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಹಿಂದೂ ಮಕ್ಕಳ್‌ ಕಚ್ಚಿ ಪಕ್ಷವು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವುದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಮಧ್ಯೆಯೇ ಈ ಘಟನೆ ನಡೆದಿದೆ. ಋತುಸ್ರಾವವಾದ ಮಹಿಳೆ ಚಿತ್ರವನ್ನು ಅಯ್ಯಪ್ಪ ಚಿತ್ರದ ಜೊತೆಗೆ ಸೇರಿಸಿ ಕೆಟ್ಟ ಅಭಿಪ್ರಾಯ ಮೂಡುವಂತೆ ವೀಡಿಯೋವನ್ನು ರೂಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next