Advertisement
ನ.20ರಂದು ಬೆಳಗಾವಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (07357) ಬೆಳಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 3:15 ಗಂಟೆಗೆ ಕೊಲ್ಲಂ ತಲುಪಲಿದೆ. ಅದೇರೀತಿ 21ರಂದು ಕೊಲ್ಲಂ-ಬೆಳಗಾವಿ ರೈಲು (07358) ಸಂಜೆ 5:10 ಗಂಟೆಗೆ ಕೊಲ್ಲಂನಿಂದಹೊರಟು ಮರುದಿನ ರಾತ್ರಿ 11:00 ಗಂಟೆಗೆ ಬೆಳಗಾವಿ ತಲುಪಲಿದೆ.
ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ
ಆಗಲಿದೆ. ಈ ರೈಲು ಒಂದು ಎಸಿ-2 ಟೈರ್, ಎಂಟು ಎಸಿ 3-ಟೈರ್, ಒಂಬತ್ತು ಸ್ಲಿಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್ ಸೇರಿ ಜನರೇಟರ್ ಕಾರ್ ಒಳಗೊಂಡಿರುವ 20 ಬೋಗಿಗಳ ಸಂಯೋಜನೆ ಹೊಂದಿದೆ. ಹುಬ್ಬಳ್ಳಿ-ಕೊಲ್ಲಂ-ಹುಬ್ಬಳ್ಳಿ: ನ.27ರಂದು ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (07359) ಮಧ್ಯಾಹ್ನ 2:40 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 3:15 ಗಂಟೆಗೆ ಕೊಲ್ಲಂ ತಲುಪಲಿದೆ. ಅದೇ ರೀತಿ 28ರಂದು ಕೊಲ್ಲಂ-ಹುಬ್ಬಳ್ಳಿ ರೈಲು (07360) ಸಂಜೆ 5:10 ಗಂಟೆಗೆ ಕೊಲ್ಲಂನಿಂದ ಹೊರಟು ಮರುದಿನ ರಾತ್ರಿ 8:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
Related Articles
Advertisement
ಬೆಳಗಾವಿ-ಕೊಲ್ಲಂ-ಬೆಳಗಾವಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್: ಡಿ.4ರಿಂದ ಜ.15ರ ವರೆಗೆ ಬೆಳಗಾವಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ (07361) ರೈಲು ಪ್ರತಿ ರವಿವಾರ ಬೆಳಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 3:15 ಗಂಟೆಗೆ ಕೊಲ್ಲಂ ತಲುಪಲಿದೆ. ಅದೇ ರೀತಿ ಡಿ. 5ರಿಂದ 16ರ ವರೆಗೆ ಕೊಲ್ಲಂ-ಬೆಳಗಾವಿ ರೈಲು (07362) ಪ್ರತಿ ಸೋಮವಾರ ಸಂಜೆ 5:10 ಗಂಟೆಗೆ ಕೊಲ್ಲಂನಿಂದ ಹೊರಟು ಮರುದಿನ ರಾತ್ರಿ 11:00 ಗಂಟೆಗೆ ಬೆಳಗಾವಿ ತಲುಪಲಿದೆ. ಈ ವಿಶೇಷ ರೈಲುಗಳು (07359/07360 ಮತ್ತು 07361/07362) ಒಂದು ಎಸಿ-2 ಟೈರ್, ಎರಡು ಎಸಿ-3 ಟೈರ್, ಹತ್ತು ಸ್ಲಿಪರ್ ಕ್ಲಾಸ್ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡು 15 ಬೋಗಿಗಳ ಸಂಯೋಜನೆ ಹೊಂದಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.