Advertisement
“ವಿ ದಿ ವುಮೆನ್’ ಎಂಬ ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕಿರೊಂದಿಗೆ ಹಿರಿಯ ಪತ್ರಕರ್ತೆ ಬರ್ಕಾ ದತ್ ಅವರು ಸಂವಾದ ನಡೆಸಿದರು. ಈ ವೇಳೆ ಸಾಧಕಿಯರು ತಾವು ನಡೆದು ಬಂದ ಹಾದಿ, ಎದುರಿಸಿದ ಸವಾಲುಗಳು, ಅವುಗಳನ್ನು ಮೀರಿ ಬೆಳೆದ ಬಗೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
Related Articles
Advertisement
ಪ್ರಧಾನಿ ನರೇಂದ್ರ ಮೋದಿಯವರು ತ್ರಿಲಿಂಗಿಗಳ ಬಗ್ಗೆ ಒಂದೂ ಮಾತನಾಡುವುದಿಲ್ಲ. ಅವರು ತಮ್ಮ ಮೌನ ಮುರಿದು ನಮ್ಮ ಸಮಸ್ಯೆಗಳನ್ನು ಆಲಿಸಲು ಮುಂದಾಗಬೇಕು. ತ್ರಿಲಿಂಗಿಗಳ ಪೈಕಿ ಶೇ.92ರಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತ್ರಿಲಿಂಗಿ ಎಂಬ ಕೀಳರಿಮೆ ಹಾಗೂ ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನ ಎಂದು ವಿಷಾದಿಸಿದರು.
ತ್ರಿಲಿಂಗಿಗಳು ಸರಿಯಿರುವುದಿಲ್ಲ. ಅವರೊಂದಿಗೆ ಮಾತನಾಡಬೇಡಿ ಎಂದು ಪೋಷಕರೇ ಮಕ್ಕಳಿಗೆ ಹೇಳುತ್ತಾರೆ. ಇದರಿಂದಾಗಿ ಮಕ್ಕಳು ಸಹ ನಮ್ಮನ್ನು ಅನುಮಾನದಿಂದಲೇ ನೋಡುತ್ತಾರೆ. ಇಂತಹ ಭಾವನೆಗಳು ಜನರ ಮನಸ್ಸಿನಿಂದ ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ನನ್ನದೇ ಆದ ಐಡೆಂಟಿಟಿ ಬೇಕಿತ್ತು: ಶ್ವೇತಾ ಬಚ್ಚನ್ ಸಂವಾದದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್, “ಇವತ್ತಿನ ಭಾರತೀಯ ಮಹಿಳೆಯರು’ ವಿಷಯ ಕುರಿತು ಮಾತನಾಡಿದರು. ಈ ವೇಳೆ ನಾನು ಖ್ಯಾತ ನಟನ ಮಗಳಾಗಿದ್ದರೂ, ಆ ಗುರುತ್ವದಿಂದ ಹೊರತಾಗಿ ಸ್ವತಂತ್ರವಾಗಿ ಜನರು ನನ್ನನ್ನು ಗುರುತಿಸಬೇಕೆಂಬ ಉದ್ದೇಶದಿಂದ ಉದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.
ನಾನು ಮೊದಲು ಎಲ್ಲಿಗೆ ಹೋದರೂ ಬಚ್ಚನ್ ಮಗಳು ಎಂದು ಜನ ಗುರುತಿಸುತ್ತಿದ್ದರು. ನನ್ನ ಸ್ನೇಹಿತರಾದವರು ತುಂಬಾ ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮದೇ ಆದ ಐಡೆಂಟಿಟಿ ಕಂಡುಕೊಂಡಿದ್ದರು. ಹೀಗಾಗಿ ನನಗೂ ನನ್ನದೇ ಆದ ಐಡೆಂಟಿಟಿ ಬೇಕು ಎಂದೆನಿಸಿತ್ತು. ಇನ್ನು ನಟನೆಯಲ್ಲಿ ಆಸಕ್ತಿಯಿದ್ದರೂ, ಶಾಲೆಯಲ್ಲಿದ್ದಾಗ ತಮ್ಮ ಪ್ರಮುಖ ಪಾತ್ರ ಮಾಡಿದರೆ, ನಾನು ಸಣ್ಣ ಪಾತ್ರ ಮಾಡಿದ್ದೇ ಕೊನೆಯಾಯಿತು ಎಂದು ಸ್ಮರಿಸಿದರು.
ನನಗೆ 23 ವರ್ಷವಿದ್ದಾಗ ಮದುವೆಯಾಯಿತು. ಗಂಡ ಉದ್ಯೋಗದಲ್ಲಿದ್ದಾಗ ಹೆಚ್ಚು ಕೆಲಸವಿರುತ್ತಿರಲಿಲ್ಲ. ಹೀಗಾಗಿ ಓದುವ ಹಾಗೂ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೆ. ಜತೆಗೆ ಈ ಮೊದಲೇ ನನ್ನ ಅಜ್ಜ-ಅಜ್ಜಿ ಪ್ರತಿವರ್ಷ ಹುಟ್ಟುಹಬ್ಬಕ್ಕೆ ಪದ್ಯಗಳನ್ನು ಬರೆದುಕೊಡುತ್ತಿದ್ದರು. ಅವೆಲ್ಲವೂ ನನ್ನ ಮೇಲೆ ಗಾಢ ಪ್ರಭಾವ ಬೀರಿದ್ದು, ಇಂದು ಕಾದಂಬರಿ ಬರೆಯಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.ಸಂವಾದದಲ್ಲಿ ನಟಿಯರಾದ ಸೋನಂ ಕೆ.ಅಹುಜಾ, ತನುಶ್ರೀ ದತ್ತ, ತಾಸ್ಸಿ ಪನ್ನು, ನಟ ವಿಕಿ ಕೌಶಲ್, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಸ್ಯಾಕೊಫೋನ್ ವಾದಕಿ ಸುಬ್ಬಲಕ್ಷ್ಮೀ ಭಾಗವಹಿಸಿದ್ದರು.