Advertisement

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

12:25 AM Dec 27, 2024 | Team Udayavani |

ಶಬರಿಮಲೆ: ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಡಿ. 26ರಂದು ಮಧ್ಯಾಹ್ನ 12ರಿಂದ 12.30ರ ಶುಭ ಮುಹೂರ್ತದಲ್ಲಿ ಮಂಡಲ ಪೂಜೆ ಜರಗಿತು. ಸಾವಿರಾರು ಮಂದಿ ಅಯ್ಯಪ್ಪ ಭಕ್ತರು ಮಂಡಲ ಪೂಜೆ ವೀಕ್ಷಿಸಿದರು.

Advertisement

ಪೂರ್ವಭಾವಿಯಾಗಿ ಬುಧವಾರ ಸಂಜೆ ತಂಗಅಂಗಿ (ಚಿನ್ನದ ಆಭರಣ) ತೊಡಿಸಿ ದೀಪಾರಾಧನೆ ನಡೆಸಲಾಯಿತು. ಮಂಡಲ ಪೂಜೆ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ರಾತ್ರಿ ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು.

ಮಕರ ಜ್ಯೋತಿ ಉತ್ಸವಕ್ಕಾಗಿ ಡಿ. 31ರಂದು ಸಂಜೆ ಮತ್ತೆ ಬಾಗಿಲು ತೆರೆಯಲಾಗುವುದು. ಡಿ. 26ರಂದು ಸಂಜೆ 7 ಗಂಟೆಯಿಂದ ಪಂಬಾದಿಂದ ತೀರ್ಥಾಟಕರಿಗೆ ಮಲೆಯೇರಲು ಅನುಮತಿಯಿರುವುದಿಲ್ಲ. ಗುರುವಾರ ವರ್ಚುವಲ್‌ ಕ್ಯೂ ಮೂಲಕ 60 ಸಾವಿರ ಮಂದಿ ಹಾಗೂ ಸ್ಟಾಟ್‌ ಬುಕ್ಕಿಂಗ್‌ ಮೂಲಕ 5,000 ಭಕ್ತರು ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next