Advertisement
ಕೇರಳದಲ್ಲಿ ಕೋವಿಡ್ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ಕೆಲವೊಂದು ನಿರ್ಬಂಧಗಳನ್ನು ಸಡಿಲಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರ ನಡುವೆ ನಡೆದ ಚರ್ಚೆಯ ಬಳಿಕ ನಿರ್ಧರಿಸಿದೆ.
Related Articles
Advertisement
ಅಭಿಷೇಕಕ್ಕೆ ಅವಕಾಶ ಇಲ್ಲಸನ್ನಿಧಾನದಲ್ಲಿ ಭಕ್ತರಿಗೆ ನೇರವಾಗಿ ತುಪ್ಪಾಭಿಷೇಕ ಮಾಡಲು ಅವಕಾಶವಿಲ್ಲ. ದೇವಸ್ಥಾನದ ಕೌಂಟರ್‌ನಲ್ಲಿ ತುಪ್ಪ ನೀಡಿ ರಶೀದಿ ಪಡೆದುಕೊಂಡು ಸನ್ನಿಧಾನ ಪೊಲೀಸ್ ಠಾಣೆಯ ಬಳಿಯಿಂದ ರಶೀದಿ ಹಾಗೂ ತುಪ್ಪದ ಪಾತ್ರೆಯ ಗುರುತು ಹೇಳಿ ಅಭಿಷೇಕ ಮಾಡಿದ ತುಪ್ಪ ಪಡೆದುಕೊಳ್ಳಬಹುದಾಗಿದೆ. ಸನ್ನಿಧಾನದಲ್ಲಿ ಭಕ್ತರಿಗೆ ನೀಡ ಲಾಗುವ ಅಪ್ಪಂ ಪ್ರಸಾದದ ಕೊರತೆ ಇದೆ. ಬೇಡಿಕೆಯಷ್ಟೂ ಅಪ್ಪಂ ಭಕ್ತರಿಗೆ ದೊರಕುತ್ತಿಲ್ಲ.ಅರವಣ ಪ್ರಸಾದ ಬೇಡಿಕೆಯಷ್ಟೂ ಲಭ್ಯವಿದೆ. ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಪುಣ್ಯಂ ಪೂಂಗಾವನ ಅಭಿಯಾನದಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಶಬರಿಮಲೆ ಯಾತ್ರೆಗೆ ಕೇರಳ ಅರಣ್ಯ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪಂಪಾದಿಂದ ಸನ್ನಿಧಾನದವರೆಗೂ ಪ್ಲಾಸ್ಟಿಕ್ ಬಾಟಲಿ, ಲಕೋಟೆ ಸಹಿತ ಯಾವುದೇ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಪ್ಲಾಸ್ಟಿಕ್ ಮುಕ್ತ ಶಬರಿಮಲೆಯಾತ್ರೆ ಭಕ್ತರಿಗೂ ಸಂತಸ ತಂದಿದೆ.