ಅಬುಧಾಬಿ: ಬೆಲರೂಸ್‌ನ 4ನೇ ಶ್ರೇಯಾಂಕಿತ ಆಟಗಾರ್ತಿ ಅರಿನಾ ಸಬಲೆಂಕಾ “ಅಬುಧಾಬಿ ಓಪನ್’ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಬುಧವಾರದ ಫೈನಲ್‌ನಲ್ಲಿ ಅವರು ರಶ್ಯದ ವೆರೋನಿಕಾ ಕುದೆರ್ಮೆಟೋವಾ ಅವರನ್ನು 6-2, 6-2 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.
ಇದು ಸಬಲೆಂಕಾಗೆ ಒಲಿದ ಹ್ಯಾಟ್ರಿಕ್ ಟೆನಿಸ್ ಪ್ರಶಸ್ತಿ. ಇದಕ್ಕೂ ಮೊದಲು ಒಸ್ಟ್ರಾವಾ ಹಾಗೂ ಲಿಂಝ್ ಕೂಟಗಳಲ್ಲೂ ಅವರು ಚಾಂಪಿಯನ್ ಆಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ನಡೆದ ಫ್ರೆಂಚ್ ಓಪನ್ ಕೂಟದ 4ನೇ ಸುತ್ತಿನಲ್ಲಿ ಕೊನೆಯ ಸೋಲು ಕಂಡಿದ್ದರು.
ಮುಖ್ಯ ಸುತ್ತಿಗೆ ಏರಲು ಅಂಕಿತಾ ವಿಫಲ :
ಹೊಸದಿಲ್ಲಿ: ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ ಪ್ರಧಾನ ಸುತ್ತಿಗೇರಲು ಭಾರತದ ಅಂಕಿತಾ ರೈನಾ ವಿಫಲರಾಗಿದ್ದಾರೆ. ಅರ್ಹತಾ ಪಂದ್ಯಾವಳಿಯ 3ನೇ ಸುತ್ತಿನಲ್ಲಿ ಅವರು ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ವಿರುದ್ಧ 2-6, 6-3, 1-6ರಿಂದ ಪರಾಭವ ಅನುಭವಿಸಿ ಈ ಅವಕಾಶ ಕಳೆದುಕೊಂಡರು.
ಅಂಕಿತಾ ಸೋಲಿನೊಂದಿಗೆ ಸುಮಿತ್ ನಾಗಲ್ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಮುಖ್ಯ ಸುತ್ತಿನಲ್ಲಿ ಆಡುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಸುಮಿತ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಲಭಿಸಿದೆ.