Advertisement

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು

12:19 PM Nov 28, 2020 | keerthan |

ಮೈಸೂರು: ಯಾರು ಪೇಮೆಂಟ್‌ ಕೊಡುತ್ತಾರೋ ಅಲ್ಲಿ ಹಳ್ಳಿಹಕ್ಕಿ ಇರುತ್ತದೆ ಎಂದು ಎಚ್‌.ವಿಶ್ವನಾಥ್‌ ಅವರಿಗೆ ಶಾಸಕ ಸಾ.ರಾ.ಮಹೇಶ್‌ ಟಾಂಗ್‌ ನೀಡಿದರು.

Advertisement

ಎಚ್.ಡಿ.ಕುಮಾರಸ್ವಾಮಿ ಅವರು ಸಖನನ್ನು ಹುಡುಕಿಕೊಂಡು ಹೋಗುತ್ತಾರೆಂದು ಜರಿದಿದ್ದ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್‌ಗೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಾ.ರಾ.ಮಹೇಶ್ ಅವರದ್ದೇ ಶೈಲಿಯಲ್ಲಿ ಕುಟುಕಿದರು.

ʻಕಾಂಗ್ರೆಸ್‌ನಲ್ಲಿದ್ದಾಗ ಪಕ್ಷವೇ ನಮ್ಮ ತಂದೆ-ತಾಯಿ ಅಂತಿದ್ದರೂ 30 ವರ್ಷಕ್ಕೆ ಡೈವೋರ್ಸ್ ಕೊಟ್ಟು ಬಂದರು. ಕೆಲವರು ಬೇಡ ಅಂದರೂ ನಾವು ಕರೆದುಕೊಂಡು ಬಂದೆವು. ಬಹಿರಂಗವಾಗಿ ಕೂಡಾವಳಿ ಮಾಡಿಕೊಂಡರೂ ಒಂದು ವರ್ಷಕ್ಕೆ ಡೈವೋರ್ಸ್ ಕೊಟ್ಟರು. ಈಗ ಯಾರು ಪೇಮೆಂಟ್ ಕೊಡ್ತಾರೆ ಅಲ್ಲಿ ಇರುತ್ತಾರೆ. ಅಲ್ಲಿಗೆ ಸಖ ಯಾರು ಅನ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಸಾ.ರಾ. ಮಹೇಶ್ ವ್ಯಂಗವಾಡಿದರು

Advertisement

Udayavani is now on Telegram. Click here to join our channel and stay updated with the latest news.

Next