ಬ್ಲೋಮ್‌ಫಾಂಟೇನ್: ನಾಯಕ ಪೀಟರ್ ಮಲಾನ್ ಮತ್ತು ಟೋನಿ ಡಿ ಜಾರ್ಜಿ ಅವರ ಆಕರ್ಷಕ ಶತಕ ಸಾಹಸದಿಂದ ಪ್ರವಾಸಿ ಭಾರತ “ಎ’ ತಂಡದೆದುರಿನ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ “ಎ’ 3 ವಿಕೆಟಿಗೆ 343 ರನ್ ಗಳಿಸಿದೆ.
14 ರನ್ನಿಗೆ 2 ವಿಕೆಟ್ ಉರುಳಿದ ಬಳಿಕ ಮಲಾನ್-ಜಾರ್ಜಿ ಸೇರಿಕೊಂಡು ಇನ್ನಿಂಗ್ಸ್ ಬೆಳೆಸತೊಡಗಿದರು. 3ನೇ ವಿಕೆಟಿಗೆ 218 ರನ್ ಪೇರಿಸಿದು. ಜಾರ್ಜಿ 117 ರನ್ (192 ಎಸೆತ, 18 ಬೌಂಡರಿ) ಮಾಡಿ ಉಮ್ರಾನ್ ಮಲಿಕ್ ಎಸೆತದಲ್ಲಿ ಬೌಲ್ಡ್ ಆದರು.
ಮಲಾನ್ 157 ರನ್ (233 ಎಸೆತ, 17 ಬೌಂಡರಿ) ಮತ್ತು ಜಾಸನ್ ಸ್ಮಿತ್ 51 ರನ್ ಮಾಡಿ ಆಡುತ್ತಿದ್ದಾರೆ.
ಇದನ್ನೂ ಓದಿ:ಮಗನಿಗಾಗಿ ಔಷಧಿ ಸಿದ್ಧಪಡಿಸುವ ಅಪ್ಪ!
ಸರೆಲ್ ಇರ್ವಿ ಮತ್ತು ರೆನಾರ್ಡ್ ವಾನ್ ಟಾಂಡರ್ ಖಾತೆ ತೆರೆಯುವ ಮೊದಲೇ ಔಟಾದಾಗ ಭಾರತ “ಎ’ ಬೌಲಿಂಗ್ ಆಯ್ದುಕೊಂಡ ನಿರ್ಧಾರ ಭರಪೂರ ಯಶಸ್ಸು ಕಾಣಲಿದೆ ಎಂದೇ ಭಾವಿಸಲಾಗಿತ್ತು.