Advertisement

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

07:25 PM Dec 09, 2021 | Team Udayavani |

ಧಾರವಾಡ : ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡು ಎರಡು ಸಲ ಸಚಿವರಾಗಿದ್ದ ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೋರೆ (84) ಅವರು ತಮ್ಮ ಜನ್ಮದಿನದ ದಿನವಾದ ಗುರುವಾರ (ಡಿ.9)ಇಹಲೋಕ ತ್ಯಜಿಸಿದ್ದಾರೆ.

Advertisement

ಅನಾರೋಗ್ಯ ಹಿನ್ನಲೆಯಲ್ಲಿ ಬುಧವಾರವಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಗಿನ ಜಾವ ನಿಧನ ಹೊಂದಿದ್ದಾರೆ. ಮರಾಠಾ ಸಮಾಜದ ನಾಯಕರಾಗಿದ್ದ ಮೋರೆ, ಮೂವರು ಪುತ್ರಿಯರು, ಮೂವರು ಸಹೋದರರು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.

ಆಸ್ಪತ್ರೆಯಿಂದ ಸ್ವಗೃಹಕ್ಕೆ ತಂದ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಕಾಂಗ್ರೆಸ್ ಪಕ್ಷದ ನಾಯಕರು ಸೇರಿದಂತೆ ಗಣ್ಯರು, ಅಭಿಮಾನಿಗಳು ಪಡೆದರು. ಇದಾದ ಬಳಿಕ ಸಂಜೆ ಹೊತ್ತಿಗೆ ಸ್ವಗೃಹದಿಂದ ಅಂತಿಮಯಾತ್ರೆ ಹೊರಟು, ಅವರ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೋರೆ ಅವರ ನಿಧನಕ್ಕೆ ನಾಡಿನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಮೋರೆ ಬಗ್ಗೆ ಒಂದಿಷ್ಟು : ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಮೋರೆ, ಮಾಜಿ ಸಿಎಂಗಳಾದ ಬಂಗಾರಪ್ಪ ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಮೋರೆ ಕಾರ್ಯ ನಿರ್ವಹಿಸಿದ್ದರು. ಮರಾಠಾ ಸಮಾಜದ ಮುಖಂಡರಾಗಿದ್ದ ಮೋರೆ, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರೆಂದು ಗುರುತಿಸಿಕೊಂಡಿದ್ದರು.

ಆಶ್ರಯ ಮನೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿರ್ಮಾಣ ಮಾಡಿ ವಿತರಿಸಿದ ಕೀರ್ತಿ ಹೊಂದಿದ್ದು, ಈ ಹಿಂದೆ ಅವಳಿ ನಗರದ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯ ತಲೆದೊರಿದಾಗ ಮಲಪ್ರಭಾ ನದಿ ಜೋಡಣೆಯ ಎರಡೇ ಹಂತಕ್ಕೆ ಸರ್ಕಾರದಿಂದ ವಿಶೇಷ ಅನುದಾನ ತೆಗೆದುಕೊಂಡು ಬಂದು ಏಳು ದಿನಕ್ಕೆ ಸರಬರಾಜು ಆಗುತ್ತದ್ದ ನೀರಿನ ವ್ಯವಸ್ಥೆಯನ್ನು ಸುಧಾರಿಸಿ ಕೇವಲ 3-4 ಕುಡಿಯುವ ನೀರು ಪೂರೈಕೆ ಆಗುವಂತೆ ಮಾಡಿದ್ದರು. ಇದರೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದವರು.

Advertisement

ಇದನ್ನೂ ಓದಿ : ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ರಾಜಕೀಯ ಜೀವನ: 1967 ರಲ್ಲಿ ಸಹಕಾರ ಕ್ಷೇತ್ರದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 1972 ರಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಿರ್ವಹಣೆ ಮಾಡಿದ್ದರು. 1983 ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರೆ 1989 ರಲ್ಲಿ ಶಾಸಕರಾಗಿ ಮರು ಆಯ್ಕೆಗೊಂಡು ಎಸ್ .ಬಂಗಾರಪ್ಪರವರ ಸಂಪುಟದಲ್ಲಿ ಸಹಕಾರ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ಮತ್ತೆ 2004 ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ 2005 ರಲ್ಲಿ ನಗರಾಡಳಿತ, ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next