Advertisement

ಶೀಘ್ರವೇ ಸಂಪುಟ ವಿಸ್ತರಣೆ: ದೇಶಪಾಂಡೆ

12:14 PM Oct 03, 2018 | Team Udayavani |

ಕಾರವಾರ: ಸದ್ಯದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು ಯಾವುದೇ ಗೊಂದಲ ಇಲ್ಲ ಎಂದು ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಹೇಳಿದರು. ಪತ್ರಕರ್ತರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಆಕಾಂಕ್ಷಿ ಶಾಸಕರನ್ನು ಗಮನಿಸಿ ಅರ್ಹರಿಗೆ ಸೂಕ್ತ ಸ್ಥಾನ ನೀಡಲಿದೆ. ಈ ವಿಚಾರದಲ್ಲಿ  ಪಕ್ಷದ ವರಿಷ್ಠರು, ಸಮನ್ವಯ ಸಮಿತಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಎಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಶಾಸಕ ಶಿವರಾಮ ಹೆಬ್ಟಾರ್‌  ಮಂತ್ರಿಯಾದರೆ ಸಂತೋಷವೇ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next