Advertisement

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

12:20 AM Nov 30, 2024 | Team Udayavani |

ಬೆಳ್ತಂಗಡಿ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ, ಅದು ಅನಿವಾರ್ಯ ಎಂದು ಕಂಡುಬಂದಲ್ಲಿ ಅವರು ಮಾಡುತ್ತಾರೆ. ಅದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಹೇಳಿದರು.

Advertisement

ಧರ್ಮಸ್ಥಳದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪಶ್ಚಿಮ ಘಟ್ಟದಲ್ಲಿ ನಕ್ಸಲ್‌ ಕಾರ್ಯಾಚರಣೆ ಮುಂದುವರಿಯುತ್ತಿದೆ. ಈಗಾಗಲೇ ನಕ್ಸಲ್‌ ನಾಯಕ ವಿಕ್ರಂ ಗೌಡ ಮೃತಪಟ್ಟ ಬಳಿಕ ಸರಕಾರ ನಕ್ಸಲರ ಶರಣಾಗತಿಗೆ ಮನವಿ ಮಾಡಿದೆ. ಸರಕಾರದ ಮನವಿಗೆ ನಕ್ಸಲರು ಸ್ಪಂದಿಸಿ ಶರಣಾದರೆ ಅವರಿಗೆ ಸರಕಾರದ ಎಲ್ಲ ಪ್ಯಾಕೇಜ್‌ ನೀಡಲಾಗುವುದು. ಇಲ್ಲ ವಾದಲ್ಲಿ ಮತ್ತೆ ಅವರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು ಎಂದರು.

ಹಾಸನದಲ್ಲಿ ಡಿ.5ರಂದು ನಡೆಯುವ ಕಾಂಗ್ರೆಸ್‌ ಸಮಾವೇಶ ಸರಕಾರದ ವಿರುದ್ಧ ವಿಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಉತ್ತರವಾಗಲಿದೆ.
ಡಿವೈಎಫ್‌ಐಯವರು ಕಮಿಷನರ್‌ ಹಠಾವೋ ಹೋರಾಟ ನಡೆಸುತ್ತಿರುವ ಕುರಿತು ಮಾಹಿತಿ ಇಲ್ಲ. ಇಲಾಖೆಯ ಶಿಸ್ತು ಎಲ್ಲರೂ ಪಾಲಿಸಬೇಕು. ಜನರ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಇಲಾಖೆ ನಿಗದಿಪಡಿಸಿದ ಸ್ಥಳದಲ್ಲಿ ಹೋರಾಟಕ್ಕೆ ಅವಕಾಶ ನೀಡಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next