Advertisement

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

10:00 AM Jun 04, 2023 | Team Udayavani |

ಮಹಾರಾಷ್ಟ್ರ: ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಟಾರ್‌ ಆಟಗಾರ ರುತುರಾಜ್ ಗಾಯಕ್ವಾಡ್ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಜೀವನದ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

Advertisement

ತನ್ನ ಬಹುಕಾಲದ ಗೆಳತಿ ಉತ್ಕರ್ಷ ಪವಾರ್‌ ಅವರೊಂದಿಗೆ ಶನಿವಾರ (ಜೂ.3 ರಂದು) ಮಹಾಬಲೇಶ್ವರದಲ್ಲಿ ವಿವಾಹವಾಗಿದ್ದಾರೆ. ಈ ಐಪಿಎಲ್‌ ನಲ್ಲಿ ಬ್ಯಾಟಿಂಗ್‌ ನಿಂದ ಸ್ಪೋಟಕ ಆಟವನ್ನಾಡಿದ ರುತುರಾಜ್ ಐಪಿಎಲ್‌ ಮುಗಿದ ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ವಿಶೇಷವೆಂದರೆ ರುತ್‌ರಾಜ್‌ ಅವರ ಪತ್ನಿ ಕೂಡ ಕ್ರಿಕೆಟಿ ಆಟಗಾರ್ತಿ ಆಗಿದ್ದು, 24 ವರ್ಷದ ಉತ್ಕರ್ಷ ದೇಶಿಯ ತಂಡದಲ್ಲಿ ಆಡಿದ್ದಾರೆ. ಮಹಾರಾಷ್ಟ್ರದ ಪರವಾಗಿ ದೇಶಿಯ ಟೂರ್ನಿಯಲ್ಲಿ ಉತ್ಕರ್ಷ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಚೆನ್ನೈ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಮೈದಾನದಲ್ಲಿ ರುತ್‌ ರಾಜ್‌  ಹಾಗೂ ಧೋನಿ ಅವರೊಂದಿಗೆ ಫೋಟೋಗೆ ಪೋಸ್‌ ಕೊಟ್ಟು ಅದನ್ನು ಪೋಸ್ಟ್‌ ಮಾಡಿದ್ದರು.

ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ರುತ್‌ರಾಜ್ “From the pitch to the altar, our journey begins!” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಶಿಖರ್ ಧವನ್, ರಶೀದ್ ಖಾನ್, ಶ್ರೇಯಸ್ ಅಯ್ಯರ್ ಮತ್ತು ಉಮ್ರಾನ್ ಮಲಿಕ್ ಹಾಗೂ ಇತರ ಆಟಗಾರರು ಕಮೆಂಟ್‌ ಮಾಡಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ನ ಆಟಗಾರರಾದ ಶಿವಂ ದುಬೆ ಮತ್ತು ಪ್ರಶಾಂತ್ ಸೋಲಂಕಿ ಅವರು ಮದುವೆಯಲ್ಲಿ ಭಾಗವಹಿಸಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next