Advertisement

“ವಿಕ್ಟರಿ ದಿನ” : ರಷ್ಯಾ ರಾಯಭಾರಿ ಸೆರ್ಗೆ ಮುಖಕ್ಕೆ ಕೆಂಪು ಬಣ್ಣ

12:19 AM May 10, 2022 | Team Udayavani |

ಕೀವ್‌/ಮಾಸ್ಕೋ: 2ನೇ ವಿಶ್ವಯುದ್ಧ ಜಯದ ದಿನವಾದ ಮೇ 9 ಅನ್ನು ರಷ್ಯಾ “ವಿಕ್ಟರಿ ದಿನ’ವಾಗಿ ಆಚರಿಸುತ್ತಿದ್ದು, ಪೋಲೆಂಡ್‌ನ‌ಲ್ಲಿ ಕೂಡ ರಷ್ಯಾ ವತಿಯಿಂದ ಈ ಸಂಭ್ರಮಾಚರಣೆ ನಡೆದಿದೆ. ಆಗ ರಷ್ಯಾ ವಿರೋಧಿ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

Advertisement

ಉಕ್ರೇನ್‌ ಮೇಲೆ ರಷ್ಯಾ ದಾಳಿ ಖಂಡಿಸಿ ನಡೆದ ಪ್ರತಿಭಟನೆ ವೇಳೆ, ವಿಕ್ಟರಿ ದಿನದ ಕಾರ್ಯಕ್ರಮದಲ್ಲಿ ಹಾಜರಿದ್ದ ಪೋಲೆಂಡ್‌ನ‌ ರಷ್ಯಾ ರಾಯಭಾರಿ ಸೆರ್ಗೆ ಆ್ಯಂಡ್ರೀವ್‌ ಅವರ ಮುಖಕ್ಕೆ ಕೆಂಪು ಬಣ್ಣ ಎರಚಲಾಗಿದೆ. ಪೂರ್ತಿ ಮುಖ ಬಣ್ಣವಾದರೂ ಏನೂ ಪ್ರತಿಕ್ರಿಯಿಸದೆ ಸುಮ್ಮನಿದ್ದ ಸೆರ್ಗೆ ಅವರು, ಮುಖ ಒರೆಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಎರಡೆರಡು ವಿಕ್ಟರಿ: ಇನ್ನೊಂದೆಡೆ, ರಷ್ಯಾದ ಈ ಖುಷಿಯನ್ನು ಹೆಚ್ಚು ದಿನ ಇರಲು ಬಿಡುವುದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿ ದ್ದಾರೆ. ಶೀಘ್ರವೇ ಉಕ್ರೇನ್‌ ಎರಡೆರಡು “ವಿಕ್ಟರಿ ದಿನ’ ಆಚರಿಸಿಕೊಳ್ಳಲಿದೆ ಎಂದೂ ಹೇಳಿದ್ದಾರೆ. ಜತೆಗೆ ರಷ್ಯಾ ವಿರುದ್ಧದ ಯುದ್ಧದಲ್ಲಿ ತಾವೇ ಗೆಲ್ಲುವ ವಿಶ್ವಾಸ ಹೊರಹಾಕಿದ್ದಾರೆ. ರಷ್ಯಾ ಅಧ್ಯಕ್ಷ ಪುತಿನ್‌ ಕೂಡ ಮಾತನಾಡಿದ್ದು, “ನೆರೆ ರಾಷ್ಟ್ರವಾದ ಉಕ್ರೇನ್‌ ನಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದ ಕಾರಣಕ್ಕೇ ನಾವು ದಾಳಿ ನಡೆಸುವುದು ಅನಿವಾರ್ಯವಾಗಿತ್ತು’ ಎಂದು ತಮ್ಮ ನಿಲು ವನ್ನು ಸಮರ್ಥಿಸಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next