Advertisement

ಚರ್ನೋಬಿಲ್‌ ಮೇಲೆ ರಷ್ಯಾ ಕಣ್ಣೇಕೆ?

11:06 PM Feb 25, 2022 | Team Udayavani |

ಇದುವರೆಗೆ ಯಾರೊಬ್ಬರು ಹತ್ತಿರಕ್ಕೆ ಸುಳಿಯಲಾರದ ಸ್ಥಳವೆಂದರೆ, ಅದು ಚರ್ನೋಬಿಲ್‌. 1986ರ ಎಪ್ರಿಲ್‌ 26ರಂದು ಇಲ್ಲಿನ ರಿಯಾಕ್ಟರ್‌ವೊಂದರಲ್ಲಿ ಅವಘಡ‌ ಸಂಭವಿಸಿ ವಿಕಿರಣ ಸೋರಿಕೆಯಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಈ ಪ್ರದೇಶಕ್ಕೆ ಕಾಲಿಡಲು ಜನ ಹೆದರುತ್ತಿದ್ದರು. ಇದುವರೆಗೆ ಉಕ್ರೇನ್‌ ವಶದಲ್ಲಿದ್ದ ಚರ್ನೋಬಿಲ್‌, ಗುರುವಾರ ರಾತ್ರಿಯಿಂದ ರಷ್ಯಾ ವಶಕ್ಕೆ ಹೋಗಿದೆ. ಇದರ ಮೇಲೆ ಏಕೆ ರಷ್ಯಾ ಕಣ್ಣು ಎಂಬ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ.

Advertisement

1.ರಷ್ಯಾಗೆ ಏಕೆ ಬೇಕು ಚರ್ನೋಬಿಲ್‌?
ಸದ್ಯ ರಷ್ಯಾ ತನ್ನ ನೆರೆಯ ದೇಶ ಬೆಲಾರಸ್‌ನಿಂದ ಉಕ್ರೇನ್‌ಗೆ ನುಗ್ಗಿದೆ. ಇದಕ್ಕೆ ಚೆರ್ನೋಬಿಲ್‌ ಮುಖಾಂತರವೇ ಹೋಗಿದೆ. ಈ ಮಾರ್ಗ ಬಿಟ್ಟು ಬೇರೆ ಮಾರ್ಗದಿಂದ ಹೋದರೆ ಕೀವ್‌ ಪ್ರಯಾಣ ಸುದೀರ್ಘ‌ವಾಗುತ್ತದೆ. ಅಲ್ಲದೆ ಚೆರ್ನೋಬಿಲ್‌ನಿಂದ ಉಕ್ರೇನ್‌ ರಾಜಧಾನಿಗೆ 108 ಕಿ.ಮೀ. ಮಾತ್ರ ಅಂತರವಿದೆ.

2.ಮಿಲಿಟರಿ ತಂತ್ರಗಾರಿಕೆ ಇದೆಯೇ?
ಸದ್ಯದ ಪ್ರಕಾರ, ಇಂಥ ಯಾವುದೇ ತಂತ್ರಗಾರಿಕೆ ಇಲ್ಲ. ಇಲ್ಲಿ ಯಾರೂ ವಾಸ ಮಾಡುತ್ತಿಲ್ಲವಾದ್ದರಿಂದ ಚರ್ನೋಬಿಲ್‌ನಿಂದ ರಷ್ಯಾಗೆ ಲಾಭವಾಗುವುದೂ ಇಲ್ಲ.

3.ಬೇರೆ ಏನಾದರೂ ಅಪಾಯಗಳಿವೆಯೇ?
ಕೆಲವು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಪ್ರಕಾರ, ಚರ್ನೋಬಿಲ್‌ನಲ್ಲಿ ಇನ್ನೂ ವಿಕಿರಣ ಹರಡಿದೆ. ಈ ಪ್ರದೇಶದಲ್ಲಿ ರಷ್ಯಾ ಬಾಂಬ್‌ ಹಾಕಿದ ಮೇಲೆ ವಿಕಿರಣದ ಪ್ರಸರಣದ ವೇಗ ಹೆಚ್ಚಾಗಿದೆ. ಇದೇನಾದರೂ ಐರೋಪ್ಯ ದೇಶಗಳ ಕಡೆಗೆ ಪಸರಿಸಿದರೆ ಅಪಾಯ ಖಂಡಿತ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next