Advertisement
ಉಕ್ರೇನ್‌ನ ಮರಿಯು ಪೊಲ್‌ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಯುದ್ಧ ವಿಮಾನಗಳು ದಾಳಿ ನಡೆಸಿದ್ದು ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎನ್ನುವ ವರದಿ ಹಿನ್ನೆಲೆಯಲ್ಲಿ ಹೆಪ್ಪಿ ಈ ಹೇಳಿಕೆ ನೀಡಿದ್ದಾರೆ. ಇದು ಯುದ್ಧಾಪರಾಧ ಎಂದು ಸಾಬೀತುಪಡಿಸಲು ಪುರಾವೆಗಳನ್ನು ಸಂಗ್ರಹಿಸಬೇಕು. ಪುಟಿನ್ ನಡೆಸುತ್ತಿರುವುದು ಯುದ್ಧವಲ್ಲ. ಅವರು ತಮ್ಮ ಸೇನೆಯಮೂಲಕ ಉಕ್ರೇನ್‌ನ ನಗರಗಳಿಗೆ ಮುತ್ತಿಗೆ ಹಾಕಿ, ದಾಳಿ ನಡೆಸುತ್ತಿದ್ದು ನಾಗರಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದು ಸಂಪೂರ್ಣ ಹೇಯ ಕೃತ್ಯವಾಗಿದೆ ಎಂದಿದ್ದಾರೆ.
ಕಿಡಿಕಾರಿದ್ದಾರೆ. ಅಲ್ಲದೆ ಟ್ವಿಟರ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಆಸ್ಪತ್ರೆಯ ಕಿಟಕಿ, ಗೋಡೆಗಳು ಕಿತ್ತು ಹೋಗಿರುವ ದೃಶ್ಯಗಳಿವೆ.
ರಷ್ಯಾ ದಾಳಿಯಿಂದ ನಗರದ ಮಧ್ಯ ಭಾಗದಲ್ಲಿರುವ ಹೆರಿಗೆ ಆಸ್ಪತ್ರೆ ಸಂಪೂರ್ಣ ನಾಶವಾಗಿದೆ. ಇದರಲ್ಲಿ ಮಕ್ಕಳ ಘಟಕವೂ ಸೇರಿದೆ, ಆದರೆ ಎಂದು ಸ್ಥಳೀಯ ಅಧಿಕಾರಿ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ. ಮರಿಯುಪೊಲ್ ನಗರವನ್ನು ರಷ್ಯಾ ಪಡೆಗಳು ಸುತ್ತುವರಿದಿದ್ದು ಕದನ ವಿರಾಮದ ಭರವಸೆಯ ಹೊರತಾಗಿಯೂ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದವರು ದೂರಿದರು. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.
Related Articles
ಮಾಸ್ಕೋ ಮೊದಲ ಬಾರಿಗೆ ಕಡ್ಡಾಯ ಮಿಲಿಟರಿ ಸೇವೆಯಿಂದ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ತಾಯಂದಿರ ಆರೋಪದ ಬಳಿಕ ರಷ್ಯಾವು 19- 27 ವರ್ಷದ ಎಲ್ಲ ಪುರುಷರಿಗೂ ಕಡ್ಡಾಯವಾಗಿ 12 ತಿಂಗಳ ಮಿಲಿಟರಿ ಸೇವೆಯನ್ನು ಹೊಂದಿರುವುದು ಜಗಜ್ಜಾಹೀರವಾಗಿದೆ. ರಷ್ಯಾದ ಸೈನ್ಯವು ಉಕ್ರೇನ್ ವಿರುದ್ಧ ವಿಶೇಷ ಕಾರ್ಯಾಚರಣೆಗಾಗಿ ಸೈನಿಕರನ್ನು ನಿಯೋಜಿಸಿದೆ ಎನ್ನುವ ಉಕ್ರೇನ್‌ನ ಆರೋಪವನ್ನು ನಿರಾಕರಿಸಿದೆ. ಮೂರು ದಿನಗಳ ಹಿಂದೆಯಷ್ಟೇ ಈ ಆರೋಪವನ್ನು ವ್ಲಾದಿಮಿರ್ ಪುತಿನ್ ನಿರಾಕರಿಸಿದ್ದರು. ಎಲ್ಲ ಸೈನಿಕರು ಹೋರಾಟದಲ್ಲಿ ಭಾಗವಹಿಸುವುದಿಲ್ಲ.
Advertisement
ಹೆಚ್ಚುವರಿ ಸೇರ್ಪಡೆಯೂ ಇರುವುದಿಲ್ಲ. ವೃತ್ತಿಪರ ಸೈನಿಕರಷ್ಟೇ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದರು. ಉಕ್ರೇನಿಯನ್‌ನ ರಾಷ್ಟ್ರೀಯತಾವಾದಿಗಳು ಖಾರ್ಕಿವ್‌ನ ವಾಯವ್ಯದಲ್ಲಿರುವ ಝೋಲೋಚಿವ್‌ನ ಜನನಿಬಿಡ ಪ್ರದೇಶಕ್ಕೆ ಸುಮಾರು 80 ಟನ್ ಅಮೋನಿಯಾವನ್ನು ತಲುಪಿಸಿದರು. ರಾಷ್ಟ್ರೀಯವಾದಿಗಳು ರಾಸಾಯನಿಕ ದಾಳಿಯ ಸಮಯದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಅವರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಇಂಟರ್ ಫ್ಯಾಕ್ಸ್ ವರದಿ ಮಾಡಿದೆ. ಆದರೆ ಈ ವರದಿಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ಪಾಸ್ಕಿ ನಿರಾಕರಿಸಿದ್ದಾರೆ.