ಆಸ್ಟ್ರೇಲಿಯಾದ ಖ್ಯಾತ ನಟ, ನಿರ್ಮಾಪಕ, ಸಂಗೀತಗಾರ ರಸೆಲ್ ಕ್ರೋವ್ ಅವರ ವಿಚಿತ್ರ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅದೇನು ಗೊತ್ತೇ? ಶನಿವಾರ ಆಸ್ಕರ್ ವಿಜೇತ ನಟ ರಸೆಲ್ ಅವರ 54ನೇ ಹುಟ್ಟುಹಬ್ಬ ಹಾಗೂ ಮದುವೆ ವಾರ್ಷಿಕೋತ್ಸವವೂ ಆಗಿತ್ತು. ಆದರೆ, ಗಾಯಕಿ ಡೇನಿಯಲ್ ಸ್ಪೆನ್ಸರ್ ಜತೆಗಿನ ಅವರ ವಿವಾಹವು 2012ರಲ್ಲೇ ಮುರಿದುಬಿದ್ದಿದ್ದ ಕಹಿ ನೆನಪನ್ನು ಮರೆಯಲೋ ಏನೋ, ರಸೆಲ್ ಅವರು ಶನಿವಾರ ತಮ್ಮಲ್ಲಿದ್ದ ಹಲವು ಅಮೂಲ್ಯ ವಸ್ತುಗಳನ್ನು ಹರಾಜು ಹಾಕಿದರು. ಆ ಹರಾಜಿಗಿಟ್ಟ ಹೆಸರೇ ‘ದಿ ಆರ್ಟ್ ಆಫ್ ಡೈವೋರ್ಸ್’
ಏನ್ನೇನೇನು ಹರಾಜು?
ಗ್ಲಾಡಿಯೇಟರ್ ಸಿನಿಮಾದಲ್ಲಿ ರಸೆಲ್ ಉಪಯೋಗಿಸಿದ್ದ ನಿಲುವಂಗಿ, ನೀಲಿ ಬಣ್ಣದ ಪ್ಯಾಂಟ್, ಸಿಂಡ್ರೆಲ್ಲಾ ಮ್ಯಾನ್ ಸಿನಿಮಾದಲ್ಲಿ ಧರಿಸಿದ್ದ ಚರ್ಮದ ಚಾಕೆಟ್, ಬುಷ್ ಫ್ಲವರ್, ಚಾರ್ಲ್ಸ್ ಬ್ಲ್ಯಾಕ್‌ಮನ್ ಅವರ ಕಲಾಕೃತಿ, 28 ವಾಚುಗಳು ಸೇರಿದಂತೆ ಹಲವಾರು ವಸ್ತುಗಳು ಭಾರೀ ಮೊತ್ತಕ್ಕೆ ಹರಾಜಾಗಿವೆ.
ಹರಾಜಿನಲ್ಲಿ ಗಳಿಸಿದ ಹಣ : 24 ಕೋಟಿ ರೂ.
ಹರಾಜಿನಲ್ಲಿದ್ದ ವಸ್ತುಗಳು : 30ಕ್ಕೂ ಹೆಚ್ಚು