ಬೇಲೂರು: ಎತ್ತಿನಹೊಳೆ ಕಾಮಗಾರಿಯಲ್ಲಿಸಾವಿರಾರು ಕೋಟಿ ರೂ. ಬೆಲೆ ಬಾಳು ಮರಗಳನ್ನು ನಾಶ ಮಾಡಿರುವುದನ್ನು ತಡೆಯಲು ಅಸಾಧ್ಯವಾಗದೆ ಸಾರ್ವಜನಿಕರಿಗೆ ಅನುಕೂಲವಾಗುವಂಥಹ ಗ್ರಾಮೀಣ ರಸ್ತೆ ಕಾಮಗಾರಿ ನಡೆಸಲು ಕೆಲ ಪಟ್ಟ ಭದ್ರ ಶಕ್ತಿಗಳು ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೆಂಕಟಿಪೇಟೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟಿಸಿದರು.
ವೆಂಕಟೀಪೇಟೆಯಿಂದ ಮಲ್ಲಾಪುರ ಗಡಿ ದಾಟಿಅರೇಹಳ್ಳಿ ತನಕ ಕೇಂದ್ರದ ಅನುದಾನದಿಂದ ರಸ್ತೆನಿರ್ಮಿಸಲಾಗುತ್ತಿದೆ. ಈ ರಸ್ತೆ, ಕಿರಿದಾಗಿದ್ದರಿಂದ ದೊಡ್ಡ ವಾಹನಗಳ ಪ್ರಯಾಣಿಕರು ಪ್ರಯಾಣಿಸುವುದು ಕಷ್ಟಕರವಾಗಿತ್ತು. ಇದನ್ನು ಮನಗಂಡು ಈ ಭಾಗದ ಎಲ್ಲಾ ಗ್ರಾಮಸ್ಥರು ಸೇರಿಎರಡೂ ಬದಿಯಿಂದ ಸುಮಾರು 1 ಮೀಟರ್ ಅಧಿಕ ತಮ್ಮ ಹಕ್ಕಿನಲ್ಲಿರುವ ಜಾಗವನ್ನು ರಸ್ತೆಅಭಿವೃದ್ಧಿಗೆ ಬಿಟ್ಟುಕೊಡಲಾಗುತ್ತಿದೆ.
ಇದರಲ್ಲಿ ಜಂಗಲ್ ಮರಳಿಗೆ ಸಂಬಂಧಿಸಿದ್ದ ಕಾಫಿ ಗಿಡ, ಸಿಲ್ವರ್, ಅಕೇಶಿಯ ಮುಂತಾದ ಮರಗಳುಸೇರಿದ್ದು ಅವುಗಳನ್ನು ಕಡಿದು ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಗುತ್ತಿದೆ. ಆದರೆ, ಕೆಲವರು ಬೆಲೆ ಬಾಳುವ ಮರಗಳನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರಿಗೆ ಕಾಮಗಾರಿ ನಿಲ್ಲಿಸುವಂತೆ ಬೆದರಿಕೆ ಒಡ್ಡುತ್ತಿದ್ದಾರೆ.
ಅವರ ವಿರುದ್ಧ ಕೇಸನ್ನುದಾಖಲಿಸಲು ತೀರ್ಮಾನಿಸಲಾಗಿದ್ದು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಹೋಗಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ಕಾರ್ಯಗಳಿಗೆ ತೊಂದರೆ ಕೊಡುವ ಜನರ ವಿರುದ್ಧ ತಕ್ಕ ಶಿಕ್ಷೆ ಕೊಡಬೇಕೆಂದು ಎಲ್ಲಾ ಗ್ರಾಮಸ್ಥರು ದೂರನ್ನು ನೀಡಲಿದ್ದೇವೆ ಎಂದರು.
ಗ್ರಾಮದ ಗೋಪಾಲ್ ಮಾತನಾಡಿ, ಈಭಾಗದಲ್ಲಿ ಶಾಲಾ ಮಕ್ಕಳು, ಬಾಣಂತಿಯರು,ವಯೋವೃದ್ಧರು, ಆಸ್ಪತ್ರೆಗೆ ಹೋಗಲು ಸರಿಯಾದರಸ್ತೆ ಇಲ್ಲದಿರುವುದನ್ನು ಗಮನಿಸಿ ಸರ್ಕಾರ ರಸ್ತೆಕಾಮಗಾರಿ ಮಾಡುತ್ತಿರುವುದನ್ನು ನಮಗೆ ಅನುಕೂಲ ವಾಗುವಂತೆ ರಸ್ತೆ ಎರಡು ಬದಿಯಲ್ಲಿ ಬರುವ ತೊಟದ ಮಾಲೀಕರು ಸ್ವ ಇಚ್ಚೆಯಿಂದ ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ ಇಲ್ಲಿ ಯಾವುದೇ ಬೆಲೆಬಾಳುವ ಶ್ರೀಗಂಧ, ನಂದಿ, ಬೀಟೆ, ಹೊನ್ನೆ ಮುಂತಾದಮರಗಳನ್ನು ಕಡಿದಿಲ್ಲ, ಕಡಿಯುವ ಮೊದಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕೆಂಬುದು ನಮಗೂ ತಿಳಿದಿದೆ ಎಂದರು.
ಮಲ್ಲಾಪುರ ಮಠದ ನವೀನ್, ವೆಂಕಟಿಪೇಟೆ ಸುರೇಶ್, ಹಿರಿಗರ್ಜೆ ಆನಂದ್, ಧರ್ಮಪ್ಪ, ಗೌರೀಶ್, ಕೃಷ್ಣ ಮತ್ತಿತರರಿದ್ದರು.