Advertisement

ಗ್ರಾಮೀಣ ಜನರಿಗೆ ಗ್ರಾಮಾಭಿವೃದ್ಧಿ ಕೇಂದ್ರ ಸಹಕಾರಿ

12:36 PM Sep 06, 2020 | Suhan S |

ನೆಲಮಂಗಲ: ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ಕೈಗೊಳ್ಳಲು ಮತ್ತು ಜನರ ಸೇವೆ ಮಾಡುವ ಮನೋಭಾವ ಇರುವವರಿಗೆ ಗ್ರಾಮಾಭಿವೃದ್ಧಿ ಕೇಂದ್ರ ಸಹಕಾರವಾಗಲಿದೆ ಎಂದು ಶ್ರೀ ವನಕಲ್ಲು ಕ್ಷೇತ್ರದ ಶ್ರೀ ಡಾ. ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ವಿಎಸ್‌ಎಸ್‌ನ್‌ ಕಾಂಪ್ಲೆಕ್ಸ್‌ನಲ್ಲಿ ದೇಸಿ ಸ್ಕಿಲ್‌ ಸಂಸ್ಥೆಯ ನೂತನ ಗ್ರಾಮಾಭಿವೃದ್ಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ವ್ಯಾಪಾರ ವಹಿವಾಟಿಗೆ ಡಿಜಿಟ ಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ತಂತ್ರಜ್ಞಾನದ ಬಳಕೆ ಮೂಲಕ ಕಚೇರಿಗೆ ಅಲೆಯುವುದು ತಪ್ಪುತ್ತದೆ. ದೇಶದ ಸ್ವಾವಲಂಬನೆ ಸಾಧನೆಗೆ ಮತ್ತು ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ವಸ್ತು ಖರೀದಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿ ಸಬಹುದು ಎಂದರು.

ಗ್ರಾಮಾಭಿವೃದ್ಧಿ ಕೇಂದ್ರದ ಸಮನ್ವಯ ಅಧಿಕಾರಿ ಬಿ.ಎಂ.ರಾಕೇಶ್‌, ದೇಶದಲ್ಲಿನ ಯುವಕರು ನಿರುದ್ಯೋಗ ಸಮಸ್ಯೆಯಿಂದ ಹೊರಬರಲು ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಮತ್ತು ಸವಲತ್ತುಗಳಿವೆ. ಅದನ್ನು ತಾನು ಬಳಸಿಕೊಂಡು ಸ್ವಯಂ ಉದ್ಯೋಗದ ಜೊತೆಯಲ್ಲಿಯೇ ಜನರ ಸೇವೆ ಮಾಡಲು ಗ್ರಾಮಾಭಿವೃದ್ಧಿ ಕೇಂದ್ರ ಸಹಕಾರಿ. ಕೇಂದ್ರದಲ್ಲಿ ಸರ್ಕಾರದ 64 ಸೇವೆ ಲಭ್ಯವಿದೆ. ಪ್ಯಾನ್‌ ಕಾರ್ಡ್‌, ಆಧಾರ್‌, ಪಹಣಿ, ರೇಷನ್‌ ಕಾರ್ಡ್‌, ಆನ್‌ಲೈನ್‌ ಹಣ ವರ್ಗಾವಣೆ ಸೇರಿ ಮುಂತಾದ ಸೇವೆಗಳನ್ನು ಕಡಿಮೆ ಶುಲ್ಕದಲ್ಲಿ ಮಾಡಿಕೊಡಲಾಗುತ್ತದೆ ಎಂದರು. ತ್ಯಾಮಗೊಂಡ್ಲು ವಿಎಸ್‌ ಎಸ್‌ನ್‌ ಅಧ್ಯಕ್ಷ ಹನುಮಂತರಾಜು, ನಿರ್ದೇಶಕ ಚಂದ್ರಪ್ಪ, ತ್ಯಾಮಗೊಂಡ್ಲು ಗ್ರಾಪಂ ಪಿಡಿಒ ದಿನೇಶ್‌, ಗ್ರಾಪಂ ಮಾಜಿ ಸದಸ್ಯರಾದ ಸುಜಿತ್‌ ಕುಮಾರ್‌, ಗೋಪಿನಾಥ್‌, ಜನೌಷಧಿ ಕೇಂದ್ರ ಪ್ರದೀಪ್‌, ಮುನಿರಾಜು, ಕಿರಣ್‌, ಗಜೇಂದ್ರ, ವಿಜಯಲಕ್ಷ್ಮೀ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next