ಪೆರ್ಲ: ಗ್ರಾಮೀಣ ಪ್ರದೇಶವಾದ ಸ್ವರ್ಗ – ವಾಣಿನಗರ ರಸ್ತೆಯಲ್ಲಿ ರಾತ್ರಿ ಪ್ರೇತ ಗೋಚರಿಸಿದೆ ಎಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ವಿಕೃತ ಮನೋರಂಜನೆ ಅನುಭವಿಸುವ ಕಿಡಿಗೇಡಿಗಳ ಬಗ್ಗೆ ಕಾನೂನು ಇಲಾಖೆ ಕಣ್ಗಾವಲು ಇಟ್ಟಿದೆ.
ಪೆರ್ಲದಿಂದ ಸ್ವರ್ಗ ಹಾಗೂ ವಾಣಿನಗರ ರಸ್ತೆ ಮೂಲಕ ತೆರಳುವಾಗ ಮಧ್ಯರಾತ್ರಿ ಪ್ರೇತ ಕಂಡುಬಂದಿದೆ ಎಂಬ ಎಡಿಟಿಂಗ್ ಫೋಟೋ ತಯಾರಿಸಿ ಇಲ್ಲಿನ ಕೆಲವು ವಾಟ್ಸ್‌ಆ್ಯಪ್ ಗುಂಪುಗಳಾದ ಜಾಲತಾಣಗಳಲ್ಲಿ ಕಿಡಿಗೇಡಿಗಳು ಕಳೆದ ಕೆಲವು ದಿನಗಳಿಂದ ಪ್ರಚುರಪಡಿಸುತ್ತಿದ್ದು ಇದು ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಲಾಗಿದೆ. ಇದರ ಹಿಂದೆ ಕಾನೂನುಬಾಹಿರ ಚಟುವಟಿಕೆಯ ದುರುದ್ದೇಶವಿದ್ದು ಕೆಲವು ಸಮಾಜದ್ರೋಹಿಗಳು ತಮ್ಮ ಮೊಬೈಲ್ ಕೆಮರಾಗಳಲ್ಲಿ ಈ ರೀತಿಯ ಚಿತ್ರಣಗಳನ್ನು ನಿರ್ಮಿಸುತ್ತಿರುವುದಾಗಿ ತಿಳಿದು ಬಂದಿದೆ.
ವಾಣಿನಗರದ ಚೆನ್ನುಮೂಲೆ ಯಲ್ಲಿ ರಸ್ತೆ ಮಧ್ಯೆ ಆಟೋರಿûಾ ಚಾಲಕನೋರ್ವನಿಗೆ ಪ್ರೇತ ಗೋಚರಿಸಿದೆ ಎಂಬುದಾಗಿ ಸುಳ್ಳು ಫೋಟೋ ಸೃಷ್ಟಿಸಿ ಸುದ್ದಿ ಹಬ್ಬಲಾಗಿದ್ದು ಬಳಿಕ ಇದೀಗ ಸ್ವರ್ಗದ ಗೋಳಿಕಟ್ಟೆಯ ಬಸ್ ನಿಲ್ದಾಣ ಬಳಿ ಪ್ರೇತ ನಿಂತಿರುವ ಫೋಟೋವೊಂದನ್ನು ಕಾರಿನಲ್ಲಿ ಹೋಗುವವರು ಸೆರೆ ಹಿಡಿದರೆಂಬ ಸುಳ್ಳು ಸುದ್ದಿ ಹಬ್ಬಲಾಗುತ್ತಿದೆ. ಇದು ಮಕ್ಕಳು, ಮಹಿಳೆಯರ ಸಹಿತ ನಾಗರಿಕರಲ್ಲಿ ಭೀತಿ ಸೃಷ್ಟಿಸುತ್ತಿರುವು ದಾಗಿ ದೂರಲಾಗಿದೆ. ಸ್ಥಳೀಯವ್ಯಕ್ತಿಯೋರ್ವ ಯುವಕರೊಡ ಗೂಡಿ ದುಷ್ಕೃತ್ಯ ನಡೆಸುವ ಬಗ್ಗೆ ಬೆಳಕಿಗೆ ಬಂದಿದ್ದು ಪೊಲೀಸರು ಆತನಮೇಲೆ ಕಣ್ಣಿಟ್ಟಿದ್ದಾರೆ. ಜನತೆ ಭಯ ಪಡಬೇಕಾಗಿಲ್ಲ ಎಂದು ಪೊಲೀಸ್ ಅ ಧಿಕಾರಿಗಳು ತಿಳಿಸಿದ್ದಾರೆ.
ಫಾರ್ವರ್ಡ್ ಮಾಡದಿರಿ
ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡುವವರ ವಿರುದ್ಧವೂ ಕಠಿನ ಕ್ರಮ ಕೈಗೊಳ್ಳ ಲಾಗುವುದೆಂದು ಸೈಬರ್ ಸೆಲ್‌ನ ಅ ಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.